ಪ್ರಕಟಣೆ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಗೆ ನೇಮಕ

ಕುಶಾಲನಗರ, ಮಾ 23 : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್.ಮೂರ್ತಿ, ಗೌರವಾಧ್ಯಕ್ಷರುಗಳಾಗಿ ಜಿಲ್ಲೆಯ ಎಲ್ಲಾ ಮಠಾಧೀಶರು, ಪ್ರಧಾನ ಕಾರ್ಯದರ್ಶಿಯಾಗಿ ಬಿ.ನಟರಾಜು, ಕಾರ್ಯದರ್ಶಿಯಾಗಿ ತೊರೆನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಬಿ.ಮಂಜುನಾಥ್,
ಆವರ್ತಿ ಮಹದೇವಪ್ಪ, ಕೋಶಾಧ್ಯಕ್ಷರಾಗಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಹಿರಿಯ ಉಪಾಧ್ಯಕ್ಷರಾಗಿ ಸೋಮವಾರಪೇಟೆಯ ನಿವೃತ್ತ ಪ್ರಾಂಶುಪಾಲ ಜೆ.ಸಿ.ಶೇಖರ್,
ಉಪಾಧ್ಯಕ್ಷರುಗಳಾಗಿ ಗೆಜ್ಜೆಹಣಕೋಡು ಗ್ರಾಮದ ಕಾಫಿ ಬೆಳೆಗಾರ ಜಿ.ಎಸ್.ದಯಾನಂದ,
ದುಬಾರೆಯ ಪ್ರವಾಸೋದ್ಯಮಿ ಎನ್.ಕೆ.ಮೋಹನ್ ಕುಮಾರ್,
ಮಡಿಕೇರಿ ವಾಣಿಜ್ಯ ತೆರಿಗೆ ಇಲಾಖೆಯ ಎಂ.ಕೆ.ಧನರಾಜು,
ನಿರ್ದೇಶಕರುಗಳಾಗಿ ತೊರೆನೂರು ಹೆಚ್.ಬಿ.ಚಂದ್ರಪ್ಪ,
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜು, ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದ ಡಾ.ಜಮೀರ್ ಅಹಮದ್,
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಕುಮಾರ್,
ಹೆಬ್ಬಾಲೆ ಪ್ರೌಢಶಾಲೆಯ ಮೆ‌.ನಾ.ವೆಂಕಟನಾಯಕ್, ಮಾಯಮುಡಿಯ ನಿವೃತ್ತ ಯೋಧ ಮೋಹನ್, ಏಳನೇ ಹೊಸಕೋಟೆಯ ಎಂ.ವಿ.ಚಂದ್ರಶೇಖರ್, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಸೋಮವಾರಪೇಟೆ ಬಿಟಿಸಿಜಿ ಕಾಲೇಜು ಉಪನ್ಯಾಸಕ ಡಾ.ದೇವರಾಜು,
ಮಡಿಕೇರಿ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮೋಹನಕುಮಾರ್, ನಂಜರಾಯಪಟ್ಟಣದ ಕೃಷಿಕ ಕೆ.ವಿ.ಪ್ರೇಮಾನಂದ,
ಕುಶಾಲನಗರ ಓಂಕಾರ ಬಡಾವಣೆಯ ಪರಮೇಶ್,
ತೊರೆನೂರಿನ ಟಿ.ಬಿ.ಜಗದೀಶ್, ತಾವರೆಕೆರೆಯ ಮನುದೇವಿ, ಸಿದ್ದಲಿಂಗಪುರದ ಎಂ.ಟಿ.ಬೇಬಿ ಹಾಗೂ ಜಿಲ್ಲೆಯ ಐದು ತಾಲ್ಲೂಕುಗಳ ಶಸಾಪ ಅಧ್ಯಕ್ಷರುಗಳು,
ಹಾಗೂ ಸಲಹೆಗಾರರಾಗಿ
ಬಿ.ಆರ್.ನಾರಾಯಣ, ಹೆಚ್.ವಿ.ಶಿವಪ್ಪ, ವಿ.ಪಿ.ಶಶಿಧರ್,
ವಕೀಲ ಪವನ್ ಸಾಗರ್
ಅವರನ್ನು ನೇಮಿಸಲಾಗಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಟಿ.ಬಿ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!