ಕುಶಾಲನಗರ, ಜ 28: ಜಿಲ್ಲೆಯ ಪಿಡಿಒ ಗಳಿಗೆ ವಿನಾಕಾರಣ ತೊಂದರೆ ನೀಡುವುದು ಸರಿಯಲ್ಲ ಎಂದು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.
ನಮ್ಮ ಕೊಡಗು ಜಿಲ್ಲೆಯಲ್ಲಿರುವ 102 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 48 PDO ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇದೀಗ ಮತ್ತೆ 5 PDO ಗಳು ಹೊರ ಜಿಲ್ಲೆಗೆ ವರ್ಗಾವಣೆಗಾಗಿ ತುದಿಗಾಲಲ್ಲಿ ನಿಂತಿರುವುದು ಯಾಕೆ ?
ಸರ್ಕಾರ ಬೆಂಗಳೂರು ಜಿಲ್ಲೆಯಿಂದ 8 PDO ಗಳನ್ನು ಕೊಡಗು ಜಿಲ್ಲೆಗೆ ವರ್ಗಾಯಿಸಿದರು ಕೂಡ ಅವರು ನಮ್ಮ ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ ಹಾಗೂ PDO ಗಳು ಮಾತ್ರವಲ್ಲ ವೈದ್ಯಕೀಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಹಾಗೂ ಎಂಜಿನಿಯರಿಂಗ್ ವಿಭಾಗ ಹಾಗೂ ಸರ್ವೆ ಡಿಪಾರ್ಟ್ಮೆಂಟ್ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಕೂಡ ಅಧಿಕಾರಿಗಳು ಹೊರ ಜಿಲ್ಲೆಯ ವರ್ಗಾವಣೆಗಾಗಿ ತುದಿಗಾಲಲ್ಲಿ ನಿಂತಿರುವುದು ಯಾಕೆ ಎಂಬುದರ ಬಗ್ಗೆ ಕೊಡಗಿನ ಇಬ್ಬರು ಶಾಸಕರುಗಳು ಗಮನ ಹರಿಸಬೇಕು, ಈಗಾಗಲೇ ಜಿಲ್ಲೆಯಲ್ಲಿ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದ್ದು ಉಳಿದ ಅಧಿಕಾರಿಗಳು ಕೂಡ ವರ್ಗಾವಣೆ ಆಗದಂತೆ ಕ್ರಮ ವಹಿಸಬೇಕು ಮತ್ತು ವಿನಾಕಾರಣ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಭಾಸ್ಕರ ನಾಯಕ್ ಒತ್ತಾಯಿಸಿದರು
Back to top button
error: Content is protected !!