ಟ್ರೆಂಡಿಂಗ್

ಕದ್ದ ಚಿನ್ನ ಕುಶಾಲನಗರದಲ್ಲಿ ಮಾರಾಟ: ಚಿನ್ನ ರಿಕವರಿಗೆ ಮುಂದಾದ ಪೊಲೀಸರು

ಕುಶಾಲನಗರ, ಜ 28: ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಳವು‌ ಮಾಡಿದ ಚಿನ್ನವನ್ನು ಕುಶಾಲನಗರದ ವಿವಿಧ ಚಿನ್ನದಂಗಡಿಗಳಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸರಿಸುಮಾರು 300 ಗ್ರಾಂ ನಷ್ಟು ಕದ್ದ ಮಾಲನ್ನು ಕಳ್ಳರು ಕುಶಾಲನಗರದ ಕೆಲವು ಸಭ್ಯ ವ್ಯಕ್ತಿಗಳ ಮೂಲಕ ಚಿನ್ನದಂಗಡಿಗಳಿಗೆ‌ ಮಾರಾಟ ಮಾಡಿದ್ದಾರೆ. ಈ ಚಿನ್ನವನ್ನು ಕದ್ದ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದು ಕುಶಾಲನಗರದ ಮೂರು ಚಿನ್ನದಂಗಡಿಗಳಿಂದ ಕದ್ದ ಮಾಲನ್ನು‌ ರಿಕವರಿ ಮಾಡುವ ಸಿದ್ದತೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಚಿನ್ನ ಮಾರಾಟ ಸಂಬಂಧ ಕುಶಾಲನಗರದ ಬ್ಯೂಟ್ ಪಾರ್ಲ್ ನ ಮಹಿಳೆ ಸೇರಿದಂತೆ ಕಣಿವೆಯ ವ್ಯಕ್ತಿಯೊಬ್ಬರ ವಿಚಾರಣೆ ನಡೆಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!