ಟ್ರೆಂಡಿಂಗ್
ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಎಂ.ಎಚ್. ಮಹಮ್ಮದ್ ಪುನರಾಯ್ಕೆ
ಕುಶಾಲನಗರ, ಜ 25:
‘ಕೊಡಗಿನ ಬಡವರ ಬೆಳಕು’ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಂ ಎಚ್ ಮಹಮ್ಮದ್ ಅವರು ಪುನರಾಯ್ಕೆಯಾಗಿದ್ದಾರೆ.
ಕುಶಾಲನಗರ ಸಮೀಪದ ಕೂಡ್ಲೂರು ಸಂಸ್ಥೆಯ ಕಚೇರಿಯಲ್ಲಿ ಎಂ ಎಚ್ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ಮಾಪಿಳ್ಳೆ ತೋಡು ಎ ಬಿ ಮೂಸ ಕಾರ್ಯದರ್ಶಿಯಾಗಿ ಗುಂಡಿಕೆರೆ ಎನ್ ಎಂ ಬಶೀರ್, ಖಜಾಂಚಿಯಾಗಿ ಕೊಂಡಗೇರಿ ಪಿ ಎ ಅಬ್ದುಲ್ ಮಜಿದ್ ಆಯ್ಕೆ ಆಗಿದ್ದಾರೆ.
ನಿರ್ದೇಶಕರಾಗಿ ವಿರಾಜಪೇಟೆಯ ಮೊಯ್ದು ಎನ್ ಸಿಟಿ, ಕಡಂಗದ ಪಥಾಹ್, ಕುಶಾಲನಗರದ ನೌಶಾದ್ ಜನ್ನತ್, ಚೌಕಂಡಳ್ಳಿ ಮಜೀದ್, ಎಮ್ಮೆಮಾಡು ಅಶ್ರಫ್ ಅವರುಗಳು ಆಯ್ಕೆಯಾಗಿದ್ದಾರೆ.
2019ರಲ್ಲಿ ಆರಂಭಗೊಂಡ ಸಂಸ್ಥೆ ಜಿಲ್ಲೆಯ ಹಲವೆಡೆ ಬಡ ಜನತೆಗೆ ಮನೆ ಕಟ್ಟಿಸಿ ಕೊಡುವುದು ಮತ್ತು ಆರ್ಥಿಕ ನೆರವು ನೀಡುವುದು, ಶಿಕ್ಷಣ ಕ್ಕೆ ಸಹಾಯ, ವೈದ್ಯಕೀಯ ಚಿಕಿತ್ಸೆಗೆ ಸಹಾಯ ಕಲ್ಪಿಸುವ ಕೆಲಸ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರಾದ ಮಹಮ್ಮದ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಗುಂಡಿಗೆರೆಯಲ್ಲಿ ಬಡ ಕುಟುಂಬಕ್ಕೆ 12 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ ಮಾದರಿಯಲ್ಲಿ 5 ಲಕ್ಷದಲ್ಲಿ ಮನೆ ನಿರ್ಮಿಸಿ ನೀಡಲಾಗಿದೆ ಮತ್ತು ಕೊಂಡಗೇರಿ ಗ್ರಾಮದಲ್ಲಿ ಮನೆಯೊಂದು ನಿರ್ಮಾಣ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಧರ್ಮ ಭೇದವಿಲ್ಲದೆ ಬಡ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯಕ್ರಮಕ್ಕೆ ಸಹಾಯ ಹಸ್ತ ಒದಗಿಸಲಾಗುವುದು.
ಯಾವುದೇ ಸಂದರ್ಭ ಸಹಾಯ ಹಸ್ತ ಅವಶ್ಯವಿದ್ದಲ್ಲಿ ದಾಖಲೆಗಳೊಂದಿಗೆ 9845030032, 9901875779 ಸಂಪರ್ಕಿಸುವಂತೆ ಕೋರಿದ್ದಾರೆ.