ಟ್ರೆಂಡಿಂಗ್

ಅನಧಿಕೃತ ಪೌಷ್ಟಿಕ ಆಹಾರ ಸಾಗಾಟ ಅರೋಪ, ಪೋಲಿಸರಿಂದ ಲಾರಿ ವಶ

ಕುಶಾಲನಗರ, ಜ.25: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರ (ಎಂ.ಎಸ್. ಪಿ. ಸಿ.) ಕೇಂದ್ರದ ಗೋದಾಮು ಕಚ್ಚಾ ವಸ್ತುಗಳ ಸಮರ್ಪಕವಾದ ಸಾಗಾಟ ಮಾಡುವ ದಾಖಲೆಗಳು ಇಲ್ಲದೆ ಅನಧಿಕೃತವಾಗಿ ಕೇಂದ್ರದಿಂದ ಶಿವಮೊಗ್ಗಕ್ಕೆ ಟಿ. ಎನ್.52.ಹಚ್. 9088 ಲಾರಿಯಲ್ಲಿ ಇಲ್ಲಿನ ವಸ್ತುಗಳು ಸಾಗಾಟವಾಗುತ್ತಿವೆ ಎಂಬ ಮಾಹಿತಿಯ ಮೇರೆಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್, ಮತ್ತು ಸದಸ್ಯ ಕೆ.ಕೆ ಭೋಗಪ್ಪ ಸೇರಿದಂತೆ ಸಾರ್ವಜನಿಕ ರು ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೂಡ್ಲೂರು ಪೌಷ್ಟಿಕ ಆಹಾರ ಕೇಂದ್ರದ ಮುಂಭಾಗದಲ್ಲಿ ನಡೆದಿದೆ.
ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಿಗೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರದ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಮತ್ತು ವ್ಯಾಪ್ತಿಯ ಗರ್ಭಿಣಿ, ಮಹಿಳೆಯರಿಗೆ ನೀಡುವ ಪೌಷ್ಟಿಕ ಆಹಾರವನ್ನು ಸಿದ್ದತೆ ಮಾಡಿ ಸಾಗಾಟ ಮಾಡುವ ಕೇಂದ್ರ ದ ಕಚ್ಚಾ ವಸ್ತುಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದರೆ ಎಂದು ಸಾರ್ವಜನಿಕ ಲಾರಿಯನ್ನು ತಡೆದು , ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಧಳಕ್ಕೆ ಬರುವಂತೆ ಒತ್ತಾಯ ಮಾಡಿದರು.
ಈ ಘಟಕದಲ್ಲಿ ಕಳೆದ ಒಂದು ವರ್ಷ ದಿಂದಲೂ ಸಿ.ಸಿ. ಟಿವಿ.ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಸರಿಯಾದ ಕ್ರಮವಲ್ಲಾ, ಈ ಕೇಂದ್ರದಲ್ಲಿ ಉತ್ಪಾದನೆ ಮಾಡುತ್ತಿರುವುದು ಮಕ್ಕಳಿಗೆ ಮತ್ತು ಗರ್ಬೀಣಿ ಮಹಿಳೆಯರಿಗೆ ನೀಡುವ ಪೌಷ್ಟಿಕ ಆಹಾರ, ಇಂತಹ ಕೇಂದ್ರದಲ್ಲಿ ಸಿ. ಸಿ. ಟಿವಿ ಅಳವಡಿಕೆ ಇಲ್ಲದಿರುವುದು ಯಾವ ನಿಯಮ, ಮತ್ತು ಮುಂದಾಗುವ ಅನಾಹುತಗಳಿಗೆ ಯಾರು ಕಾರಣರೂ, ಎಂಬ ಪ್ರಶ್ನೆ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ನವರ ಅರೋಪವಾಗಿತು, ತಕ್ಷಣದಿಂದಲೇ ಸಿ.ಸಿ.ಟಿವಿ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಧಳಕ್ಕೆ ಅಗಮಿಸಿದ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ. ಜೆ. ವಿಮಲನವರು ಕೇಂದ್ರ ದಿಂದ ಕಚ್ಚಾ ವಸ್ತುಗಳನ್ನು ಸಾಗಾಟ ಮಾಡುವ ಸರಕಾರದ ಮಟ್ಟದಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯ ಸಂಪೂರ್ಣವಾದ ಮಾಹಿತಿಯನ್ನು,‌ಮತ್ತು ಸರಕಾರದ ಹೊಸ ಯೋಜನೆಯ ವಿವರಗಳನ್ನು ತಿಳಿಸಿದರು.
ನಂತರ ಪೋಲಿಸ್ ಠಾಣೆಯಲ್ಲಿ ರಾಜ್ಯ ಮಟ್ಟದಲ್ಲಿ ಟೆಂಡರ್ ಪಡೆದ ಶಿವಮೊಗ್ಗದ ಹರಿಹರೇಶ್ವರ ಮಹಿಳಾ ಉದ್ಯೋಗ ಮತ್ತು ಸೇವಾ ಸಂಘಕ್ಕೆ ಕಚ್ಚಾ ವಸ್ತುಗಳು ಸಾಗಾಟವಾಗಿ ಸಿದ್ದ ಪಡಿಸಿದ ಅಹಾರ ವಸ್ತುಗಳು ಬರುವ ವಾಹನದ ದಾಖಲೆಗಳನ್ನು ಪರಿಶೀಲನೆ ನಡೆಸಿ ತಾಲ್ಲೂಕು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಅದಕ್ಕೆ ಸಂಬಂಧಿಸಿದ ಲಾರಿ ಮತ್ತು ಕೇಂದ್ರದ ದಾಖಲೆಗಳನ್ನು ಪಡೆದು ಅಹಾರ ವಸ್ತುಗಳನ್ನು ತುಂಬಿದ ಲಾರಿಯನ್ನು ಬಿಡುಗಡೆಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!