ಟ್ರೆಂಡಿಂಗ್
ಮೂಲತಃ ಕುಶಾಲನಗರದ ಕಲ್ಪನಾ ಕುಟ್ಟಪ್ಪ ಗೆ ರಾಷ್ಟ್ರಮಟ್ಟದ ರಕ್ಷಾಮಂತ್ರಿ ಪದಕ
ಕುಶಾಲನಗರ, ಜ 25:, ಕೊಡಗು ಜಿಲ್ಲೆಯ ಕುಶಾಲನಗರ ಮೂಲದ ಕಲ್ಪನಾ ಕುಟ್ಟಪ್ಪ ರಾಷ್ಟ್ರಮಟ್ಟದಲ್ಲಿ ರಕ್ಷಾ ಮಂತ್ರಿ ಪದಕ ಕ್ಕೆ ಭಾಜನರಾಗಿದ್ದಾರೆ.
ಪ್ರಸಕ್ತ ಮೈಸೂರಿನ ಕ್ರಸ್ಟ ಕಾಲೇಜಿನಲ್ಲಿ ಪ್ರಥಮ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಕಲ್ಪನಾ ಕುಟ್ಟಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದು ಈ ತಿಂಗಳ 20ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದೇಶದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಪದಕ ಲಭಿಸಿದ್ದು ರಾಜ್ಯದ ಕಲ್ಪನಾ ಕುಟ್ಟಪ್ಪ ಈ ಸಾಧನೆ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಎನ್ ಸಿಸಿ ಕೆಡೆಟ್ ಆಗಿರುವ ಕಲ್ಪನಾ ಅವರ ವಿಶೇಷ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ.
ಕಲ್ಪನಾ ಕುಟ್ಟಪ್ಪ ಅಂತರರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟುವಾಗಿದ್ದು ಇದುವರೆಗೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 150 ಪದಕಗಳನ್ನು ಗಳಿಸಿದ್ದಾರೆ.
ಇತ್ತೀಚೆಗೆ ಇಟಲಿಯಲ್ಲಿ ನಡೆದ ವರ್ಲ್ಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ, ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಎರಡು ಚಿನ್ನ ಒಂದು ಬೆಳ್ಳಿ ಮತ್ತು ಒಂದು ಕಂಚು ಪದಕ ಗಳಿಸುವಲ್ಲಿ ಕಲ್ಪನಾ ಕುಟ್ಟಪ್ಪ ಸಾಧನೆ ಮಾಡಿದ್ದಾರೆ.
ಕಲ್ಪನಾ ಕುಟ್ಟಪ್ಪ ಮೂಲತಹ ಕುಶಾಲನಗರ ಮಾದಾಪಟ್ಟಣ ನಿವಾಸಿ ಪ್ರಸ್ತುತ ಮೈಸೂರಿನಲ್ಲಿರುವ ಮುಕ್ಕಾಟಿರ ರವಿ ಕುಟ್ಟಪ್ಪ ಮತ್ತು ಸ್ವಾತಿ ದಂಪತಿಗಳ ಪುತ್ರಿ.