ಕ್ರೀಡೆ

ಕೊಡಗು ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ

ಕುಶಾಲನಗರ, ಫೆ 24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೊಡಗು‌ ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ ತಾಲೂಕು ಶಾಖೆ ಆಶ್ರಯದಲ್ಲಿ ಕೂಡಿಗೆಯ ಕ್ರೀಡಾಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು-2023-24 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎರಡು ದಿನಗಳ ಕಾಲ‌ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸದಾ ಒತ್ತಡ ಹಾಗೂ ಕಡತಗಳ‌ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ‌ ನೌಕರ ವರ್ಗದವರಿಗೆ ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮಗಳು ಅಲ್ಪ ರಂಜನೆ‌ ನೀಡಲಿದೆ. ಕ್ರೀಡಾಕೂಟಗಳ, ಸಾಂಸ್ಕೃತಿ‌ಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ‌ ನಿತ್ಯ ಜಂಜಾಟಗಳಿಂದ ಬಿಡುವು ದೊರೆಯುವ ಕಾರಣ ಹುಮ್ಮಸ್ಸು, ಹುರುಪು ಉಂಟಾಗಲಿದೆ ಎಂದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಗ್ರಾಪಂ ಸದಸ್ಯ ಟಿ.ಪಿ.ಹಮೀದ್ ಮಾತನಾಡಿ, ಕೊಡಗಿನಲ್ಲಿ ಶೇ.30 ರಷ್ಟು ಅಧಿಕಾರಿ ವರ್ಗದ ಕೊರತೆಯಿರುವುದು ಕಾಣಬಹುದು. ಇದರಿಂದಾಗಿ ಇರುವ ನೌಕರರು, ಸಿಬ್ಬಂದಿಗಳ‌ ಮೇಲೆ‌ ಹೆಚ್ಚಿನ ಒತ್ತಡ ಉಂಟುಮಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಈ‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲೆಯ ಶಾಸಕರು ಕ್ರಮವಹಿಸಲಿದ್ದಾರೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಮಾತನಾಡಿ, ಸರಕಾರಿ‌ ನೌಕಕರಲ್ಲಿ ಹಲವು ಮಂದಿಯಲ್ಲಿ ಉತ್ತಮ ಪ್ರತಿಭೆ ಅಡಗಿರುತ್ತದೆ. ಉದ್ಯೋಗದ‌ ಜಂಜಾಟದಿಂದ ಪಾಲ್ಗೊಳ್ಖುವಿಕೆಗೆ ಸಾಧ್ಯವಾಗದಂತಹವರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ಈ ವೇದಿಕೆ ಅನುಕೂಲಕರವಾಗಲಿದೆ ಎಂದರು.

ಸರಕಾರಿ‌ ನೌಕರರ ಸಂಘದ ಕೊಡಗು ಶಾಖೆ ಅಧ್ಯಕ್ಷ ಪೊನ್ನಚ್ಚನ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೂಡುಮಂಗಳೂರು ಗ್ರಾಮ ಸದಸ್ಯೆ ಫಿಲೋಮಿನಾ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅರುಣ್ ರಾವ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಮೂಡ್ಲಿಗೌಡ, ಸರಕಾರಿ‌ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವಿ.ಎಸ್.ಸುಗುಣಾನಂದ, ತಾಲೂಕು ಉಪಾಧ್ಯಕ್ಷ ದಯಾನಂದ ಪ್ರಕಾಶ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಚ್.ಕೆ.ಕುಮಾರ್, ರಾಜ್ಯ ಪ್ರಶಸ್ತಿ ದೈಹಿಕ ಶಿಕ್ಷಕ ಪೂರ್ಣೇಶ್, ಸಂಘದ ಪ್ರಸನ್ನಕುಮಾರ್, ಕ್ರೀಡಾ ಶಾಲಾ ಮುಖ್ಯೋಪಾಧ್ಯಾಯ ದೇವ್ ಕುಮಾರ್, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಮೀನುಗಾರಿಕೆ ಇಲಾಖೆಯ ಮಿಲನ ಭರತ್,

ನೌಕರ ವರ್ಗದ ವಿವಿಧ ಸಂಘಗಳ ಪ್ರಮುಖರಾದ ಎಂ.ಸಿ.ಅರುಣ್ ಕುಮಾರ್, ಪಿ.ಡಿ.ರಾಜೇಶ್, ಎನ್.ಎಂ.ನಾಗೇಶ್, ವಿ.ಜಿ.ದಿನೇಶ್, ಪ್ರದೀಪ್, ಎಸ್.ಟಿ.ಶಮ್ಮಿ, ಹಂಡ್ರಂಗಿ ನಾಗರಾಜು, ಸುರೇಂದ್ರ, ಗೋಪಿನಾಥ್, ರತ್ನಕುಮಾರ್, ರವಿ‌ ತಮ್ಮಯ್ಯ, ಮತ್ತಿತರರು ಇದ್ದರು.

ಇದೇ ಸಂದರ್ಭ ರಾಜ್ಯ,‌ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ನೌಕರರನ್ನು ಗೌರವಿಸಲಾಯಿತು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!