ಸುದ್ದಿಗೋಷ್ಠಿ

ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ: ಡಾ.ಪ್ರಣವಾನಂದಸ್ವಾಮೀಜಿ ಎಚ್ಚರಿಕೆ

ಸಿಎಂ ತವರು ಜಿಲ್ಲೆಯಲ್ಲೇ ಯುವಕನ ಸಾವು ಆತಂಕಕಾರಿಬೆಳವಣಿಗೆ ಡಾ.ಪ್ರಣವಾನಂದಸ್ವಾಮೀಜಿ

ಹುಣಸೂರು.ಫೆ.25.
ತಾಲೂಕಿನ ದಾಸನಪುರದ ವಿದ್ಯಾರ್ಥಿ ಮುತ್ತುರಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ಸರಕಾರ ಸಿಬಿಐಗೆ ಒಪ್ಪಿಸಬೇಕು ಹಾಗೂ ಮೃತನ ಕುಟುಂಬಕ್ಕೆ ೫೦ಲಕ್ಷ ರೂ ಪರಿಹಾರ ನೀಡುವಂತೆ ಈಡಿಗ ಸಮುದಾಯದ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಶಕ್ತಿಪೀಠದ ಡಾ.ಪ್ರಣವಾನಂದಸ್ವಾಮೀಜಿ ಒತ್ತಾಯಿಸಿದರು.
ಅವರು ಶನಿವಾರ ಮುತ್ತುರಾಜ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಯಲ್ಲಿ ಈವರೆಗೆ ೨೧ಮಂದಿ ಬಿಲ್ಲವ ಮತ್ತು ಈಡಿಗ ಸಮುದಾಯದ ಯುವಕರ ಹತ್ಯೆಯಾಗಿದೆ. ಇದೀಗ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಯುವಕನ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದು ಹೀಗೆ ಮುಂದುವರೆಯಲು ಬಿಡುವುದಿಲ್ಲವೆಂದ ಅವರು ಕುಟುಂಬದ ನೆರವಿಗೆ ಹಿಂದೂಪರ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು ನೆರವಿಗೆ ಬಂದು ಆತ್ಮಸ್ಥೆÊರ್ಯ ತುಂಬಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಸ್ವಾಮಿಜಿಗಳು, ನಿಸ್ಪಕ್ಷಪಾತವಾಗಿ ತನಿಖೆಯಾಗಬೇಕಾದಲ್ಲಿ ತನಿಖಾ ತಂಡ ರಚಿಸಿ ಪ್ರಕರಣವನ್ನು ತಂಡಕ್ಕೆವಹಿಸುವ ಅಗತ್ಯತೆ ಇದೆ.
ಮೃತರ ಮನೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಂತ್ವನ ಹೇಳಬೇಕು, ೫೦ ಲಕ್ಷ ರೂಗಳನ್ನು ಪರಿಹಾರ ಘೋಷಣೆ ಮಾಡಬೇಕು, ಹಿಂದುಳಿದವರ ನಾಯಕ ಸಿದ್ದರಾಮಯ್ಯನವರು ನೊಂದ ಕುಟುಂಬದ ಒಬ್ಬರಿಗೆ ಸರಕಾರಿ ಕೆಲಸ ಅಥವಾ ಯಾವುದಾದರೊಂದು ಇಲಾಖೆಯಲ್ಲಿ ಗುತ್ತಿಗೆ ಆಧಾರದ ಕೆಲಸ ಕಲ್ಪಿಸಬೇಕೆಂದು ಒತ್ತಾಯಿಸಿ, ಇನ್ನು ಹತ್ತು ದಿನದಲ್ಲಿ ನಮ್ಮ ಈ ಬೇಡಿಕೆ ಈಡೇರದಿದ್ದರೆ ಈಡಿಗ ಸಮುದಾಯ ಹಾಗೂ ಇತರೆ ಹಿಂದುಳಿದ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳೊಳಗೂಡಿ ರಾಜ್ಯದ್ಯಂತ ಬೀದಿಗಿಳಿದು ಹೋರಾಟ ನಡೆಸುವ ಜೊತೆಗೆ ಬೆಂಗಳೂರಿನ ಪ್ರೀಡಂಪಾರ್ಕ್ನಲ್ಲಿ ಅಮರಣಾತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಬಸವ ನಾಗಿದೇವ ಶರಣಸ್ವಾಮೀಜಿ ಮಾತನಾಡಿ ಓಟಿನ, ರಾಜಕಾರಣದ ಆಧಾರದಲ್ಲಿ ಇಂತಹ ಪ್ರಕರಣಗಳು ವ್ಯತ್ಯಾಸ ಆಗಲಿವೆ, ನಮ್ಮ ತಂಡ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಪ್ರವೃತ್ತರಾಗಿದ್ದು. ಈ ಘಟನೆಯಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ನಾವು ಬದ್ದ, ನಮ್ಮ ಸಂವಿಧಾನ ನೋಂದವರಿಗೆ ನ್ಯಾಯ ಕೊಡಿಸಲು ಸಹಕಾರಿಯಾಗಿದ್ದು. ನಮ್ಮ ಅಂಬೇಡ್ಕರ್ ಅವರ ಸಂವಿಧಾನ ದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬುದು ವಿಶ್ವಾಸ ಇದೆ ಅದಕ್ಕಾಗಿ ಕಾಯುತ್ತೇವೆ.
ಗೋಷ್ಟಿಯಲ್ಲಿ ಬಸವಮೂರ್ತಿ ಸ್ವಾಮಿಜಿ, ಈಡಿಗರ ಸಂಘದ ರಾಜ್ಯ ಕಾರ್ಯದರ್ಶಿ ವಸಂತ್‌ಕುಮಾರ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಲಕ್ಷ್ಮಿ‌ನಾರಾಯಣ ಲೋಹಿತ್‌ಅರಸ್, ತಾಲೂಕು ಈಡಿಗರ ಸಂಘದ ಕಾರ್ಯದರ್ಶಿ ಶ್ಯಾಮ್,ಶ್ರೀನಿವಾಸ್ ಮತ್ತಿತರರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!