ಕಾರ್ಯಕ್ರಮ

ಕುಶಾಲನಗರ ಅಕ್ಕನ ಬಳಗದಿಂದ ಅಕ್ಕಮಹಾದೇವಿ ಜಯಂತಿ

ಕುಶಾಲನಗರ, ಏ 10: : ಮಹಿಳೆಯರು ತಮ್ಮಲ್ಲಿನ ಜ್ಞಾನ, ಶಕ್ತಿ ಹಾಗೂ ಸಾಮರ್ಥ್ಯ ಗಳ ಆರಿವು ಮಾಡಿಕೊಳ್ಳದೇ ಹೊರ ಪ್ರಪಂಚದ ಏನೆಲ್ಲಾ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರು ಯಾವುದೇ ಪ್ರಯೋಜನವಿಲ್ಲ ಎಂಬುದು ಅಕ್ಕ ಮಹಾದೇವಿಯ ಆಶಯವಾಗಿತ್ತು ಎಂದು ಕುಶಾಲನಗರದ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯಕುಮಾರ್ ಹೇಳಿದರು.

ಇಲ್ಲಿನ ಬಸವೇಶ್ವರ ದೇವಾಲಯ ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಜವಾದ ಅರಿವು ತನ್ನನ್ನು ತಾನು ಅರಿಯುವುದು.
ಹಾಗಾಗಿಯೇ ಕೌಶಿಕ ಮಹಾರಾಜನ ಯಾವುದೇ ಮೋಹಕ್ಕೆ ಒಳಗಾಗದೇ ಎಲ್ಲಾ ಸುಖ ಭೋಗಗಳನ್ನು ತೊರೆದು ಚನ್ನಮಲ್ಲಿಕಾರ್ಜುನನೇ ಎನ್ನ ಪತಿ ಎಂದು ಆರಾಧಿಸಿ ಅಮರತ್ವ ಪಡೆದ ಅಕ್ಕಾ ಮಹಾದೇವಿ
ಹನ್ನೆರಡನೇ ಶತಮಾನದ ಶ್ರೇಷ್ಠ ವಚನಗಾರ್ತಿ ಎಂದು ಬಣ್ಣಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ಅಕ್ಕಾಮಹಾದೇವಿ ಅಂದಿನ ಸಮಾಜದಲ್ಲಿ ಇದ್ದ ಕಂದಾಚಾರಗಳ ವಿರುದ್ಧ ಸೆಟೆದು ನಿಂತು ಅನ್ಯಾಯ, ಅಕ್ರಮ, ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಿಳೆಯರ ಧೀ ಶಕ್ತಿಯಾಗಿದ್ದ ಅಕ್ಕಾ ಮಹಾದೇವಿ ಹನ್ನೆರಡನೇ ಶತಮಾನದಲ್ಲಿಯೇ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ್ದರು ಎಂದು ಶಿವಪ್ಪ ವಚನಗಳ ಮೂಲಕ ವಿಶ್ಲೇಷಿಸಿದರು.
ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಹಾಗೂ
ಅಕ್ಕನ ಬಳಗದ ಪ್ರಧಾನ ಕಾರ್ಯದರ್ಶಿ ಮನು ಜಗದೀಶ್ ಅಕ್ಕಾಮಹಾದೇವಿಯ ಜೀವನ ಸಾಧನೆಗಳ ಕುರಿತು ಮಾತನಾಡಿದರು.
ಜಯಂತಿ ಅಂಗವಾಗಿ ಅಕ್ಕಾಮಹಾದೇವಿ ಭಾವಚಿತ್ರಕ್ಕೆ ಪುಷ್ಪ ಗಳಿಂದ ಅಲಂಕೃತ ಗೊಳಿಸಿ ಪೂಜಿಸಲಾಯಿತು.
ನಂತರ ನೆರೆದ ಮಂದಿಗೆ ಪ್ರಸಾದ ಹಾಗೂ ದಾಸೋಹ ನೀಡಲಾಯಿತು.
ಈ ಸಂದರ್ಭ
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು,
ಬಸವೇಶ್ವರ ದೇವಾಲಯದ ಸ್ಥಾಪಕ ಅಧ್ಯಕ್ಷ ಎಂ.ಬಿ.ಬಸವರಾಜು,
ವೀರಶೈವ ಮಹಾಭಾ ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್,
ಎಂ.ಎಸ್.ಗಣೇಶ್, ಎಂ.ಎಸ್.ಲೋಕೇಶ್, ಅಜಿತ್, ವಿನಯ್, ಹೆಚ್.ಪಿ.ಸಂಗಮೇಶ್, ಮುಳ್ಳುಸೋಗೆ ಬಸವರಾಜು,
ಆಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಪುಷ್ಪ ಹೇಮಾಕ್ಷ, ನೇತ್ರಾವತಿ, ಮೋಹಿನಿ, ಮಾಲತಿ ಲೋಕೇಶ್, ವಾಸಂತಿ ಸಂಗಮೇಶ್, ಚಂದ್ರಕಲಾ ಶಾಂಬಶಿವಮೂರ್ತಿ,ಗಂಗಮ್ಮ ಶಿವಪ್ಪ, ಪ್ರೇಮಾ ಮಹಾದೇವಪ್ಪ, ಮಮತಾ ಲಿಂಗರಾಜು
ಮೊದಲಾದವರಿದ್ದರು.
ಮಹಿಳೆಯರಿಂದ ದೇವಾಲಯದಲ್ಲಿ ಅಕ್ಕಮಹಾದೇವಿ ವಚನಗಳ ಗಾಯನ ಸ್ಪರ್ಧೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!