ಕ್ರೀಡೆ

ಮಾರ್ನಿಂಗ್ ಕ್ರಿಕೆಟರ್ಸ್ ಪಂದ್ಯಾಟ: ಭಗವತಿ ಕ್ರಿಕೆಟರ್ಸ್ ಪ್ರಥಮ, ಪುನಿತ್ & ಪ್ರದೀಶ್ ಫ್ರೆಂಡ್ಸ್ ದ್ವಿತೀಯ

ಕುಶಾಲನಗರ ಅ 21: ಎರಡನೇ ವರ್ಷದ ಮಾರ್ನಿಂಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಗವತಿ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಪುನೀತ್ ಅಂಡ್ ಪ್ರದೀಶ್ ಫ್ರೆಂಡ್ಸ್ ದ್ವಿತೀಯ ಸ್ಥಾನ ಗಳಿಸಿದೆ.

ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಂತಹ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 20 ತಂಡ ಭಾಗವಹಿಸಿದ್ದು ಫೈನಲ್ ಪ್ರವೇಶಿಸಿದ ಕುಶಾಲನಗರದ ಭಗವತಿ ಕ್ರಿಕೆಟರ್ಸ್ ಪುನೀತ್ ಅಂಡ್ ಪ್ರದೇಶ್ ಫ್ರೆಂಡ್ಸ್ ತಂಡದ ನಡುವೆ ರೋಚಕ ಪಂದ್ಯ ನಡೆಯಿತು. ನಾಲ್ಕು ಓವರ್ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಪುನೀತ್ ಅಂಡ್ ಪ್ರದೀಶ್ ಫ್ರೆಂಡ್ಸ್ ತಂಡ 28 ರನ್ ಕಲೆ ಆಕಿತು. ಇದನ್ನು ಬೆನ್ನಟ್ಟಿದ ಭಗವತಿ ಕ್ರಿಕೆಟರ್ ತಂಡ 3.4 ಓವರುಗಳಲ್ಲಿ 29 ರನ್ ಗಳಿಸಿ 2 ವಿಕೆಟುಗಳಿಂದ ಜಯಗಳಿಸಿತು. ನಂತರ ಬಹುಮಾನ ವಿತರಣೆ ನಡೆಯಿತು ಪ್ರಥಮ ನಗದು 20,000 ಹಾಗೂ ಟ್ರೋಫಿ ದ್ವಿತೀಯ ನಗದು 10,000 ಟ್ರೋಫಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾರ್ನಿಂಗ್ ಕ್ರಿಕೆಟರ್ ಸಂಘದ ಅಧ್ಯಕ್ಷ ಹೆಚ್. ಆರ್. ವೆಂಕಟೇಶ್ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಗೌರವಾಧ್ಯಕ್ಷ ಸುರೇಶ್, ಫಯಾಜ್, ಜಯಪ್ರಕಾಶ್, ಮಣಿ, ಆದಂ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!