ಕುಶಾಲನಗರ ಆ 31 : ರೈತರು ಶೂನ್ಯ ಬಂಡವಾಳದ ಬೆಳೆಗಳ ಉತ್ಪಾದನೆಯಲ್ಲಿ ರಸಾಯನಿಕ ಗೊಬ್ಬರ ಬದಲಿಗೆ ನೈಸರ್ಗಿಕ ರಸಗೊಬ್ಬರ ಬಳಸಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಹರಾಜು ವಿಭಾಗದ ಅಧೀಕ್ಚಕಿ ವೈ.ಎಲ್.ಸವಿತಾ ಸಲಹೆ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವಾಣಿಜ್ಯ ಇಲಾಖೆ, ತಂಬಾಕು ಮಂಡಳಿ,ಹರಾಜು ಮಾರುಕಟ್ಟೆ ರಾಮನಾಥಪುರ ಇವರ ಸಹಯೋಗದಲ್ಲಿ ಮಣಜೂರು ಗ್ರಾಮದ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ, ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ ಎಂದು ಹೇಳಿದರು. ಉತ್ತಮ ಇಳುವರಿ ಮತ್ತು ಗುಣಮಟ್ಟದ ಹೊಗೆಸೊಪ್ಪು ಉತ್ಪಾದನೆಗೆ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಕಾಪಾಡುವುದು ಬಹಳ ಪ್ರಮುಖವಾಗಿದೆ ಎಂದು ಹೇಳಿದರು.
ಐಟಿಸಿ ಕಂಪನಿ ವ್ಯವಸ್ಥಾಪಕ ಪಿ. ರಾಜಶೇಖರ್
ಮಾತನಾಡಿ,ತಂಬಾಕು ಕೃಷಿಯಲ್ಲಿ
ವೈಜಾನಿಕ ಕೃಷಿ ಪದ್ದತಿ ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆ ಮಾಡಿ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಅಧಿಕಾರಿ ಟಿ.ಎಸ್. ಪ್ರಸನ್ನ ಮೂರ್ತಿ ಮಾತನಾಡಿ,ಹೊಗೆಸೊಪ್ಪಿನ ಬೆಳೆಯಲ್ಲಿ ಮಧ್ಯಂತರ ವ್ಯವಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು. ಇದರಿಂದ ಕಳೆ ನಿಯಂತ್ರಣದ ಜೊತೆಗೆ ಮಣ್ಣಿನಲ್ಲಿ ವಾಯು ಸಂಯೋಜನೆ ಹಾಗೂ ಬೇರಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.
ಈ ಸಂದರ್ಭ ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
ಬಸವರಾಜು,ಕ್ಷೇತ್ರಾಧಿಕಾರಿ ಉಮೇಶ್ ಕುಮಾರ್, ಕ್ಷೇತ್ರ ಸಹಾಯಕರು ರಂಗಸ್ವಾಮಿ, ಡಿ. ಮಹೇಶ್ , ಎಸ್.ಎಂ.ಗುರುವೇಂದ್ರ,ಕೃಷ್ಣೇಗೌಡ, ಶಂಕರೇಗೌಡ,ಎಂ.ಕೆ.ಮಂಜು,ಎನ್.ಎನ್.ಮಮತಾ,ಜಿ.ಎಚ್.ಇಂದಿರಾ,ಕೆ.ವಿ.ಅಕ್ಷತಾ, ಪ್ರಗತಿಪರ ರೈತ ಶೇಷಾಪ್ಪ,
ತಾಲ್ಲೂಕು ಎಪಿಸಿಎಂಎಸ್ಸಿ ಮಾಜಿ ಉಪಾಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕ ಸಿ.ಎನ್.ಲೋಕೇಶ್ ಎಪಿಸಿಎಂಎಸ್ಸಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಿದ ಪ್ರಗತಿಪರ ರೈತರಾದ ತೊರೆನೂರು ಉಮೇಶ್,ಮೂಡ್ಲುಕೊಪ್ಪಲು ವೀರಭದ್ರ,ಕಡವಿನಹೊಸಹಳ್ಳಿ ಪಾರ್ಥಕುಮಾರ್,ಹೆಬ್ಬಾಲೆ ಆನಂದ,ಎಂ.ಆರ್.ಜ್ಯೋತಿ ಶೇಷಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರ ಸಮೀಪದ ಚಿಕ್ಕನಾಯಕನಹೊಸಹಳ್ಳಿ ಯಲ್ಲಿ ರೈತರಿಗೆ ಏರ್ಪಡಿಸಿದ್ದ ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವವನ್ನು ರಾಮನಾಥಪುರ ತಂಬಾಕು ಮಂಡಳಿ ಹರಾಜು ಅಧೀಕ್ಷಕಿ ವೈ.ಎಲ್.ಸವಿತಾ ಉದ್ಘಾಟಿಸಿದರು.ಗ್ರಾ.ಪಂ.ಉಪಾಧ್ಯಕ್ಷ ಬಸವರಾಜು, ಕ್ಷೇತ್ರಾಧಿಕಾರಿ ಪ್ರಸನ್ನ ಮೂರ್ತಿ,ಉಮೇಶ್ ಕುಮಾರ್ ಇದ್ದರು.
Back to top button
error: Content is protected !!