ಕುಶಾಲನಗರ, ಫೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋರಮಂಡಲ್ ಇಂಟರ್ ನ್ಯಾಶನಲ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ ಶುಂಠಿ ಮತ್ತು ಅಡಿಕೆ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಕಾರ್ಯಗಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ರೈತರು ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಬೇಕಿದೆ. ರಾಸಾಯನಿಕ ದೊಂದಿಗೆ
ಸಾವಯವ ಗೊಬ್ಬರವನ್ನು ಕೂಡ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯುವಂತಾಗಬೇಕಿದೆ. ಇಂತಹ ಕೃಷಿ ಕಾರ್ಯಗಾರಗಳು ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಕೃಷಿಗೆ ಸಂಬಂಧಿಸಿದಂತೆ ಕೋರಮಂಡಲ್ ಇಂಟರ್ ನ್ಯಾಶನಲ್ ಲಿಮಿಟೆಡ್ ನ ಪ್ರವೀಣ್, ಅಕ್ಷಯ್, ಡಾ. ರಾಜಶೇಖರ್, ಹರೀಶ್ ಹೆಗಡೆ ಅವರು ಬೆಳೆಯ ಫಲವತ್ತತೆ, ರೈತರ ಜಮೀನಿನ ಮಣ್ಣು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.
ಸಹಕಾರ ಸಂಘದ ವ್ಯಾಪ್ತಿಯ ಪ್ರಗತಿಪರ ರೈತರಾದ ಸೋಮಶೇಖರ್ ಮತ್ತು ಕೆ.ಸಿ. ಅನಿಲ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ಸಹಕಾರ ಸಂಘದ ನಿರ್ದೇಶಕರಾದ. ಕೆ.ಪಿ. ರಾಜು, ರಾಮಚಂದ್ರ, ಎಸ್. ಎಸ್. ಕೃಷ್ಣ, ಕೃಷ್ಣೇಗೌಡ, ರಮೇಶ್, ಪ್ರಗತಿಪರ ರೈತರಾದ. ಸೋಮಶೇಖರ್, ಕೆ. ಸಿ ಅನಿಲ್ ಕುಮಾರ್ ಇದ್ದರು.
Back to top button
error: Content is protected !!