ಕುಶಾಲನಗರ, ಆ.06: ಹಾರಂಗಿಯ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ 2022 -23 ಸಾಲಿನಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ರೈತರಿಗೆ ವಿತರಣೆ ಮಾಡಲು ಈಗಾಗಲೇ ಸಿದ್ದಗೊಂಡಿವೆ.
ಈ ಸಾಲಿನಲ್ಲಿ ಉತ್ತಮವಾದ ತೆಂಗಿನ ಗಿಡಗಳನ್ನು ಬೆಳೆಸಲಾಗಿದ್ದು, ಸರಕಾರ ನಿಗದಿಪಡಿಸಿದ 75. ರೂ ದರದಲ್ಲಿ ರೈತರಿಗೆ ತಾ, 8. ರಿಂದ ವಿತರಣೆ ಮಾಡಲಾಗುವುದು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಚಾಲನೆಯನ್ನು ನೀಡಲಿದ್ದಾರೆ ಎಂದು ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.
ಆಸಕ್ತ ರೈತರು ತಮ್ಮ ಜಮೀನಿನ ಆರ್, ಟಿ ಸಿ, ಮತ್ತು ಆಧಾರ್ ಪ್ರತಿಯನ್ನು ಒದಗಿಸಿ ಒಂದು ತೆಂಗಿನ ಗಿಡಕ್ಕೆ 75 ರೂಗಳನ್ನು ಪಾವತಿಸಿ ಪಡೆಯಬಹುದಾಗಿದೆ .
Back to top button
error: Content is protected !!