ಸವಿ ರುಚಿ

ಕುಶಾಲನಗರ ಗೌಡ ಸಮಾಜದಲ್ಲಿ ಆಟಿ ಸಂಭ್ರಮ

ಕುಶಾಲನಗರ, ಆ – 06 : ಇಲ್ಲಿನ ಅರೆಭಾಷಿಕ ಸಮುದಾಯದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವ – ಸಹಾಯ ಸಂಘದ ವತಿಯಿಂದ ಆಟಿ ಸಂಭ್ರಮ -2023 ಕಾರ್ಯಕ್ರಮ ಸ್ಥಳೀಯ ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು
ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಉದ್ಘಾಟಿಸಿದರು. ಈ ಸಂದರ್ಭ ನಿವೃತ್ತ ಯೋಧ ದೇವಜನ ಚಿಣ್ಣಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಮಹಿಳಾ ಒಕ್ಕೂಟದ ಅಧ್ಯಕ್ಷ ಚೀಯಂಡಿ ಶಾಂತಿ, ನಿರ್ದೇಶಕರಾದ
ಚೆರಿಯಮನೆ ಪಾರ್ವತಿ, ಗೌಡ ಸ್ವ ಸಹಾಯ ಸಂಘದ ಅಧ್ಯಕ್ಷೆ ಸೂದನ ಲೀಲಾವತಿ, ಶಾರದಾ ಬಸಪ್ಪ, ಪಟ್ಟಂದಿ ಬೀನಾ ಸೀತಾರಾಂ ಮೊದಲಾದವರಿದ್ದರು.
ಆಟಿ ಸಂಭ್ರಮದಲ್ಲಿ ಮಹಿಳೆಯರು ಸಿದ್ದಪಡಿಸಿ ತಂದು ಪ್ರದರ್ಶನ ಕ್ಕಿಟ್ಟಿದ್ದ ವೈವಿಧ್ಯಮಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಈ ಪೈಕಿ
ಎಡಿಕೇರಿ ಪ್ರೀತು ಸುಜಿತ್ ಅವರು ಸಿದ್ದಪಡಿಸಿದ್ದ ಮರಗೆಣಸಿನ ಹಪ್ಪಳ, ಚಿಲ್ಲನ ಲತಾ ಗಣಿಪ್ರಸಾದ್ ಅವರ ಮರಕೆಸದ ಪತ್ರೊಡೆ ಹಾಗೂ ಆಟಿಸೊಪ್ಪಿನ ರಸದ ಶಾವಿಗೆ, ನಡುವಟ್ಟಿರ ವನಿತ ಸುಜಿತ್ ಅವರ ಬಾಳೆ ಹೂವಿನ ಪಲ್ಯ,
ಕಲಾ ಆನಂದ್ ಅವರ ಡ್ರೈ ಫಿಶ್ ಕರಿ, ಫಿಶ್ ಎಗ್ ರೋಸ್ಟ್ ಇನ್ನು ಇತರೇ ಮಹಿಳೆಯರು ಸಿದ್ದಪಡಿಸಿ ತಂದಿದ್ದ ಕಹಿಹುಳಿ ಪಜ್ಜಿ, ಆಟಿ ರಸದ ಹಲ್ವಾ, ಮಾವಿನ ಹಣ್ಣಿನ ಹಲ್ವ, ಕಣಲೆ ಉಪ್ಪಿನಕಾಯಿ, ಪಂದಿ ಕರಿ ಮೊದಲಾದ ಖಾದ್ಯಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರೂ ಸಾಮೂಹಿಕವಾಗಿ ಆಟಿ ಸೊಪ್ಪಿನ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!
WhatsApp us