ಕಾರ್ಯಕ್ರಮ

ಕೊಡಗು‌ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ

ಕುಶಾಲನಗರ, ನ 12:ಕೊಡಗು‌ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ‌ ನಡೆಯಿತು. ಸಂಘದ ಅಧ್ಯಕ್ಷರಾದ ನಂದಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘಟನೆ‌ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಸಂಘಟನೆಯಲ್ಲಿ ಒಮ್ಮತದ ನಿರ್ಧಾರಗಳಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಂಟಿ‌ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಮಾತನಾಡಿ, ರೈತರು ಕೃಷಿ ಪರಿಕರಗಳ ಮಾರಾಟಗಾರರ ಮೇಲೆ ಇಟ್ಟಿರುವ‌ ನಂಬಿಕೆ ಕಳೆದುಕೊಳ್ಳದಂತೆ ವ್ಯವಹರಿಸುವುದು ಅಗತ್ಯ. ಅತ್ಯಂತ ಸೂಕ್ಷ್ಮ‌ ಕ್ಷೇತ್ರವಾಗಿರುವ ಕಾರಣ ಮಾರಾಟಗಾರರು ಅತ್ಯಂತ ಜಾಗರೂಕರಾಗಿ ವ್ಯವಹರಿಸುವುದು ಅಗತ್ಯವಿದೆ. ಹಿಂದಿನ‌ ಕಾಲಘಟಕ್ಕೂ ಪ್ರಸ್ತುತ ಕಾಲಘಟಕ್ಕೂ ತುಂಬಾ ವ್ಯತ್ಯಾಸವಿದ್ದು ತಾಂತ್ರಿಕತೆ ಸುಧಾರಿಸಿಕೊಂಡು ವ್ಯವಹಾರಿಕವಾಗಿ ಹೆಚ್ಚು ಪರಿಣಾಮಕಾರಿಯಾಗಲು ಸಂಘಟನೆ ಸಹಕಾರಿಯಾಗಲಿದೆ ಎಂದರು. ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್, ಖಜಾಂಚಿ ವೆಂಕಟೇಶ್, ಸಂಘದ ಕಾರ್ಯದರ್ಶಿ ರಾಮಕೃಷ್ಣ, ನಿರ್ದೇಶಕರಾದ ಅಯ್ಯಪ್ಪ, ಅರವಿಂದ್, ಕೆ.ಸಿ.ಕಾವೇರಪ್ಪ, ತಾಂತ್ರಿಕ ಅಧಿಕಾರಿ ಗಿರೀಶ್ ವೇದಿಕೆಯಲ್ಲಿದ್ದರು. ಕೊಡಗು ಜಿಲ್ಲೆಯಾದ್ಯಂತ ವಿವಿಧ ಭಾಗಗಳ ಮಾರಾಟಗಾರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!