ಕುಶಾಲನಗರ, ಜು 24: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹುಲುಗುಂದ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಧರ್ಮಲಿಂಗಂ ಎಂಬವರ ಮನೆ ಸಂಪೂರ್ಣವಾಗಿ ಬಿದ್ದುಹೋಗಿದು ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದಂತ ಭಾಸ್ಕರ್ ನಾಯಕ್ ರವರು ಮತ್ತು ಗ್ರಾಮ ಲೆಕ್ಕಾಧಿಕಾರಿಯದಂತಹ
ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ಮಾಡಿದರು ನಂತರ ಮನೆಯ ಮಾಲೀಕರಾದ ಧರ್ಮಲಿಂಗ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿದ ಭಾಸ್ಕರ್ ನಾಯಕ್ ರವರು ಕೂಡಲೇ ವಿಚಾರವನ್ನು ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಮತ್ತು ಸರ್ಕಾರದಿಂದ ಸಿಗುವಂತಹ ಪರಿಹಾರ ನಿಧಿಯನ್ನು ಆದಷ್ಟು ಬೇಗ ವಿತರಿಸಲು ಪ್ರಯತ್ನಿಸಲಾಗುವುದು
ಎಂದು ಭರವಸೆ ನೀಡಿದರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ ಗ್ರಾಮ ಪಂಚಾಯಿತಿಯಿಂದ ಸಿಗುವಂತ ಸೌಲಭ್ಯಗಳನ್ನು ಆದಷ್ಟು ಬೇಗ ನೀಡಬೇಕೆಂದು ಸೂಚಿಸಿದರು ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರುಗಳಾದಂತ ಮಣಿಕಂಠ ಮತ್ತು ಲಕ್ಷ್ಮಿ ಉಪಸ್ಥಿತರಿದ್ದರು
Back to top button
error: Content is protected !!