ಮಾನವೀಯತೆ

ಕೋಮಾವಸ್ಥೆಯಲ್ಲಿರುವ ವಿದ್ಯಾರ್ಥಿ ಭುವಿನ್ ಚಿಕಿತ್ಸೆಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದಿಂದ ಆರ್ಥಿಕ ನೆರವು

ಕುಶಾಲನಗರ, ಜು 23:  ಜುಲೈ 7 ರಂದು ಆಟೋ ಅಪಘಾತಕ್ಕೊಳಗಾಗಿ ಇದೀಗ ಮೈಸೂರಿನ ಜೆಎಸ್ಎಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶನಿವಾರಸಂತೆಯ ತೊರೆನೂರು ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಭುವಿನ್ ಇವರ ವೈದ್ಯಕೀಯ ಚಿಕಿತ್ಸೆಗೆ ಕೊಡಗು ಜಿಲ್ಲೆ ಅಲ್ಲದೆ ದಕ್ಷಿಣ ಕನ್ನಡ ,ಮೈಸೂರು ಜಿಲ್ಲೆ ಹಾಗೂ ಹೊರದೇಶಗಳಿಂದಲೂ ದಾನಿಗಳಿಂದ ಸಹಾಯಧನ ರೂಪದಲ್ಲಿ ಬಂದ ರೂ.51701-00 ರೂಪಾಯಿಗಳನ್ನು ವಿದ್ಯಾರ್ಥಿಯ ತಂದೆ ಸುನಿಲ್ ಅವರಿಗೆ ನೀಡಲಾಯಿತು.

ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕವು ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು ಕೊಡಗು ಜಿಲ್ಲೆಯ ಕುಲಾಲ ಕುಂಬಾರ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ಸದಸ್ಯರಾದ ಚಂದ್ರಶೇಖರ್ ಕುಲಾಲ್ ಮೂರ್ನಾಡು, ಸುರೇಶ್ ಕುಲಾಲ್ ಮಡಿಕೇರಿ, ಶಶಿ ಮೂರ್ನಾಡು, ಪವನ್ ಕುಲಾಲ್, ಅರುಣ್ ಕುಲಾಲ್ ಚೇರಂಬಾಣೆ, ಜಯಪ್ರಕಾಶ್ ಮಡಿಕೇರಿ, ಪನ್ನೇ ರಾಜೇಶ್ ಕುಲಾಲ್, ರಾಜುಮಣಿ ಚೇರಂಬಾಣೆ, ರಾಮಚಂದ್ರ ಕುಶಾಲನಗರ ಹಾಗೂ ವಿನು ಚೇರಂಬಾಣೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!