ಮಾನವೀಯತೆ

ಕೂಡಿಗೆ ವೃದ್ದಾಶ್ರಮದಲ್ಲಿ ಕಣ್ಣೀರಿಟ್ಟ ಡಾ.ಬಿ.ಎ.ದಿನೇಶ್ ಶೆಟ್ಟಿ

ಆಶ್ರಮದ 30 ಮಂದಿಗೆ ಹೊಸ ಬಟ್ಟೆ, ಹಣ್ಣುಹಂಪಲು ವಿತರಣೆ

ಕುಶಾಲನಗರ, ಡಿ 29: ಕೂಡಿಗೆ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿರುವವರನ್ನು ಕಂಡು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಭಾವುಕರಾಗಿ‌ ಕಣ್ಣೀರಿಟ್ಟ ಘಟನೆ ನಡೆಯಿತು.

ಕುವೆಂಪು ಜಯಂತಿ ಹಿನ್ನೆಲೆಯಲ್ಲಿ ಆಶ್ರಮ ವಾಸಿಗಳಿಗೆ ಹೊಸ ವಸ್ತ್ರ, ಫಲಹಾರಗಳನ್ನು ವಿತರಿಸಲು ತೆರಳಿದ ಸಂದರ್ಭ ಸಂಬಂಧಗಳನ್ನು ಕಳೆದುಕೊಂಡು ಅನಾಥರಂತೆ ಜೀವಿಸುತ್ತಿರುವ ಹಿರಿಯ ಜೀವಗಳ ಪರಿಸ್ಥಿತಿ ಕಂಡು ದಿನೇಶ್ ಅವರು ಕಣ್ಣೀರಿಟ್ಟರು.
ಇಂದಿನ ಕಾಲಘಟ್ಟದಲ್ಲಿ ಮನ, ಮನೆಯೊಳಗಿನ ಸಂಬಂಧದ‌ ಕೊಂಡಿ ಕಳಚುತ್ತಿರುವುದು ವಿಷಾದನೀಯ ಸಂಗತಿ. ಹೆತ್ತವರನ್ನು ದೇವರಂತೆ ಕಾಣುವ ಬದಲು ಅನಾಥರಾಗಿ ಮಾಡಿರುವವರ ಬಗ್ಗೆ ಆವೇಶಭರಿತರಾದರು. ಯಾರೂ ಕೂಡ ಎಂದಿಗೂ ಪೋಷಕರು, ಸಂಬಂಧಿಕರ ಬಗ್ಗೆ ತಾತ್ಸಾರ ತೋರಬಾರದು. ಮನೆಯವರು ಕಡೆಗಣಿಸಿದರೂ ಕೂಡ ಆಶ್ರಮದ ಮೇಲ್ವಿಚಾರಕ ಚಂದ್ರು ಅವರು ಎಲ್ಲರನ್ನು ಸಲಹುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅನಾಥಾಶ್ರಮಕ್ಕೆ ಸ್ವಂತ ಜಾಗ ಇಲ್ಲದ ಕಾರಣ ಆಶ್ರಮ ಖಾಲಿ ಮಾಡಬೇಕಿರುವ ಹಿನ್ನೆಲೆಯಲ್ಲಿ ದಾನಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು. ತಾನು ಕೂಡ ಮುಂದಿನ ದಿನಗಳಲ್ಲಿ ಇಂತಹ ಇಂದು ಅನಾಥಾಶ್ರಮ ಸ್ಥಾಪಿಸಿ‌ ನೊಂದವರ ಬಾಳಿಗೆ ಬೆಳಕಾಗುವ ಬಗ್ಗೆ ಚಿಂತನೆ ಹೊಂದಿರುವುದಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!