ಕುಶಾಲನಗರ, ಜು 14: ಕೊಡಗು ಸೇರಿದಂತೆ ಕೇರಳ ರಾಜ್ಯಕ್ಕೆ ಗಾಂಜಾ ಮತ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಒರಿಸ್ಸಾ ರಾಜ್ಯದ ಜೈಪುರದ ಬಾಲಿಪಾಡಿಯಾ ಗ್ರಾಮದ ಎಂ.ಸೂರ್ಯಕಾಂತ್ (37) ಅಲಿಯಾಸ್ ಗೋಬಿ ಸೂರಿ ಸೇರಿದಂತೆ ಒಟ್ಟು 17 ಮಂದಿ ಸಂಗಡಿಗರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 13.5 ಕೆಜಿ ಗ್ರಾಂ, 19.5 ಗ್ರಾಂ ಎಂಡಿಎಂಎ, 14 ಮೊಬೈಲ್ ಗಳು ಎರಡು ಆಟೋ, ಎರಡು ಸ್ಕೂಟಿ, ಒಂದು ಮಾರುತಿ 800 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಜಾ ಮಾರಾಟ, ಸೇವನೆಯಲ್ಲಿ ತೊಡಗಿದ್ದ ಸುಂಟಿಕೊಪ್ಪದ ರಫೀಕ್, ಅಭಿಷೇಕ್, ಮಹಮ್ಮದ್ ಮಕ್ರಾಂ, ನಯನ್, ಮೂರ್ನಾಡು ಅತೀಕ್ ಸೇರಿದಂತೆ ಇನ್ನಿತರರನ್ನು ಬಂಧಿಸಲಾಗಿದೆ. ಕುಶಾಲನಗರದ ಡಿವೈಎಸ್ಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಕೆ.ರಾಮರಾಜನ್, ಗಾಂಜಾ ಪೆಡ್ಲರ್ ಗೋಬಿ ಸೂರ್ಯ ಈ ಹಿಂದೆ ವಿರಾಜಪೇಟೆಯಲ್ಲಿ ಕಳೆದ 15 ವರ್ಷ ಗೋಬಿ ಅಂಗಡಿ ನಡೆಸುತ್ತಿದ್ದು ಆಟೋ ಕೂಡ ಓಡಿಸುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಬೈಲುಕೊಪ್ಪ ವ್ಯಾಪ್ತಿಯಲ್ಲಿ ವಾಸವಾಗಿದ್ದು ಇಲ್ಲೂ ಕೂಡ ಗೋಬಿ ಅಂಗಡಿ ನಡೆಸುತ್ತಿದ್ದನು. ಒರಿಸ್ಸಾದಿಂದ ಬಸ್ ಮೂಲಕ ಗಾಂಜಾ ಮತ್ತು ಎಂಡಿಎಂಎ ತರಿಸಿ ತನ್ನ ಸಂಗಡಿಗರ ಮೂಲಕ ಎಲ್ಲೆಡೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ತಿಳಿಸಿದರು. ಕುಶಾಲನಗರ ನಗರ, ಗ್ರಾಮಾಂತರ, ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 5 ಪ್ರಕರಣ ದಾಖಲಾಗಿತ್ತು. ಎಸ್ಪಿ ರಾಮರಾಜನ್, ಹೆಚ್ಚುವರಿ ಎಸ್ಪಿ ಸುಂದರ್ ರಾಜ್,ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಹೇಶ್ ಕುಶಾಲನಗರ, ಸುಂಟಿಕೊಪ್ಪ ಠಾಣಾಧಿಕಾರಿಗಳಾದ ರವೀಂದ್ರ, ಮೋಹನ್ ರಾಜ್, ಶ್ರೀಧರ್, ಎಎಸ್ ಐ ವೆಂಕಟೇಶ್, ಸಿಬ್ಬಂದಿಗಳಾದ ಸತೀಶ್, ದಿನೇಶ್ ಕುಮಾರ್, ಪ್ರಕಾಶ್, ಸಂದೀಪ್ ರೈ, ಪ್ರವೀಣ, ಪ್ರಿಯ ಕುಮಾರ್, ದಿನೇಶ್, ರಂಜಿತ್, ಸಂಪತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!