ಕುಶಾಲನಗರ, ಜು 13: ಕುಶಾಲನಗರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಐ ಮಹೇಶ್.ಬಿ.ಜಿ, ಠಾಣಾಧಿಕಾರಿಗಳಾದ ರವೀಂದ್ರ, ಮೋಹನ್ ರಾಜು ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿ: 13-07-2023 ರಂದು ಇಂದಿರಾ ಬಡವಾಣೆ ಬಳಿ ಹಾಗೂ ಪ್ರಥಮ ದರ್ಜೆ ಕಾಲೇಜು ಸಮೀಪದ ವಾಲ್ಮೀಕಿ ಭವನದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕೇರಳ ರಾಜ್ಯದ ಸಿಜಿನ್ ಮಂಗಳಸೇರಿ ಮತ್ತು ಸೋಮವಾರಪೇಟೆ ಕಲ್ಕಂದೂರು ನಿವಾಸಿ ಮುಸ್ತಾಫಾ, (40), ಹಕೀಂ(23), ಗುಮ್ಮನಕೊಲ್ಲಿ ನಿವಾಸಿ ವಿನೋದ್ (41), ಶಂಕರ (41) ಎಂಬುವವರನ್ನು 1 ಕೆ.ಜಿ. 75 ಗ್ರಾಂ ಗಾಂಜಾ ಮತ್ತು 5.6 ಗ್ರಾಂ MDMA ನಿಷೇದಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಿ: 13-07-2023 ರಂದು ಗುಡ್ಡೆಹೊಸೂರುನಿಂದ ಸಿದ್ದಾಪುರ ಕಡೆಗೆ ಹೋಗುವ ರಸ್ತೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಹೊಸತೋಟ ನಿವಾಸಿಗಳಾದ, ಫೈಜಲ್.ಕೆ.ಹೆಚ್, (30), ಶರೀಫ್ (32) ವರ್ಷ, ಗೋಂದಿಬಸವನಹಳ್ಳಿ ನಿವಾಸಿ ಶಶಿಕುಮಾರ್.ಜೆ.ಎ (31) , ಗುಡ್ಡೆಹೊಸೂರು ನಿವಾಸಿ ವಿನೀಶ್, (28) ಎಂಬುವವರನ್ನು 1 ಕೆ.ಜಿ. 160 ಗ್ರಾಂ ಗಾಂಜಾ ಮತ್ತು 6.5 ಗ್ರಾಂ MDMA ನಿಷೇದಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
Back to top button
error: Content is protected !!