ಪ್ರಕಟಣೆ

ಜುಲೈ 19 ರಂದು ಲಯನ್ಸ್ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ, ಪದಗ್ರಹಣ ಕಾರ್ಯಕ್ರಮ

ಕುಶಾಲನಗರ,‌ಜು‌ 13: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರೆನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ‌ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಜು.19 ರಂದು ಸಂಜೆ 5.30 ಕ್ಕೆ ಲೋಕಾರ್ಪಣೆಗೊಳಿಸಲಾಗುವುದು.

ಸಂಜೆ 7 ಗಂಟೆಗೆ ಎಪಿಸಿಎಂಎಸ್ ಸಭಾಂಗಣದಲ್ಲಿ ಲಯನ್ಸ್ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಸುಮನ್ ಬಾಲಚಂದ್ರ, ಕಾರ್ಯದರ್ಶಿಯಾಗಿ ಟಿ.ಕೆ.ರಾಜಶೇಖರ್, ಖಜಾಂಚಿ ಯಾಗಿ ನಿತಿನ್ ಎನ್ ಗುಪ್ತ ಅಧಿಕಾರ ಸ್ವೀಕರಿಸಲಿದ್ದಾರೆ.

ಲಯನ್ಸ್ ಮಾಜಿ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಅವರು ಡಯಾಲಿಸಿಸ್ ಸೆಂಟರ್ ಉದ್ಘಾಟಿಸುವುದರೊಂದಿಗೆ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!