ಕುಶಾಲನಗರ, ಏ 23: ಬಸವ ಜಯಂತಿ ಅಂಗವಾಗಿ ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಷಟಲ್ ಕಾಕ್ ಪಂದ್ಯಾವಳಿಯನ್ನು ಷಟಲ್ ಕ್ರೀಡಾಪಟುವೂ ಆದ ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕ್ರೀಡಾ ಕೂಟಗಳು ಯುವ ಜನರಲ್ಲಿ ಉತ್ತಮ ವಾದ ಸ್ನೇಹ ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಕರೆಕೊಟ್ಟರು.
ಪಂದ್ಯಾವಳಿಯಲ್ಲಿ ಏಳು ತಂಡಗಳ 80 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭ ವೃತ್ತ ನಿರೀಕ್ಷಕ ಮಹೇಶ್,
ಜಂಪ್ ಸ್ಮಾಶ್ ಕ್ರೀಡಾಂಗಣದ ಮಾಲೀಕ ಶರತ್, ಮೋಹನ್ ಕುಮಾರ್, ಪಿಡಿಒ ಲೋಕೇಶ್, ಲೋಕೋಪಯೋಗಿ ಇಲಾಖೆ ಅಭಿಯಂತರ ಶೈಜನ್ ಪೀಟರ್, ಹಿರಿಯ ಆಟಗಾರ ಸತ್ಯಣ್ಣ, ಕೆ.ಎಸ್.ಮೂರ್ತಿ, ಆನಂದ್, ಕಾಫಿ ಅರುಣ್, ಅನೂಜ್ ಮೊದಲಾದವರಿದ್ದರು.
Back to top button
error: Content is protected !!