ಕುಶಾಲನಗರ, ಏ 23: ಕುಶಾಲನಗರ ಪುರಸಭೆ ವ್ಯಾಪ್ತಿಯ ಓಂಕಾರ್ ಬಡಾವಣೆಯ ಮಾತೃಶ್ರೀ ಕಾರ್ ಕ್ಲಿನಿಕ್ ಅಂಗಳದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು.
ಕಾರ್ ಮೆಕಾನಿಕ್ ಸಂಘಟನೆ ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು.
ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿನ ಮೂಢನಂಬಿಕೆ ಮತ್ತು ಅಸಮಾನತೆಯನ್ನು ತೊಡೆದು ಹಾಕಿದ ಕಾರಣ ನಮಗೆ ಇಂದು ಸಮಾಜದಲ್ಲಿ ಸಮಾನತೆ ದೊರೆತಿದೆ. ಹಾಗಾಗಿ ನಾವು ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಧಾನ ಮತ್ತು ಸಮಾನತೆಯ ಬದುಕನ್ನು ಸಾಗಿಸಬೇಕಿದೆ ಎಂದರು.
ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲ ಕುಮಾರ್ ಮಾತನಾಡಿ, ಕಾಯಕವೇ ಕೈಲಾಸ ಎಂಬ ಭಕ್ತಿಕ್ರಾಂತಿ ಸಾರಿದ ಬಸವಣ್ಣ, ಪ್ರಪಂಚದ ಮೊಟ್ಟಮೊದಲ ಪ್ರಜಾಪ್ರಭುತ್ವದ ಸಭಾಮಂಟಪ ಅನುಭವ ಮಂಟಪ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿ ವಿಶ್ವಗುರು ಎನಿಸಿಕೊಂಡರು ಎಂದರು.
ಪುರಸಭೆ ಸದಸ್ಯ ಎಂ.ಬಿ.ಸುರೇಶ್, ಬಡಾವಣೆ ಮಾಲೀಕ ಎಂ.ಕೆ.ಧನರಾಜು, ಕಾರ್ಮಿಕ ಸಂಘಟನೆಯ ಗಣೇಶ್, ನಂಜುಂಡಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಇದ್ದರು.
Back to top button
error: Content is protected !!