ಕ್ರೈಂ

ಮನೆಗಳ್ಳರ ಬಂಧನ, ಚಿನ್ನಾಭರಣ, ಕಾರುಗಳು ವಶ

ಕುಶಾಲನಗರ, ಫೆ 03: ಕುಶಾಲನಗರ ಪೊಲೀಸರು 3 ಮನೆಗಳ್ಳರನ್ನು ಬಂಧಿಸಿ 12 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಕುಶಾಲನಗರದ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಎಂ.ಪಿ.ಖಾದರ್ ಎಂಬುವವರ ಪುತ್ರ ಎಂ.ಎ. ಇಬ್ರಾಹಿಂ (27), ನಾಪೋಕ್ಲು ಸಮೀಪದ ಕೊಕೇರಿ ಗ್ರಾಮದ ಸುರೇಶ್ ಎಂಬುವವರ ಪುತ್ರ ಸುದೀಪ್ (21) ಮತ್ತು ಮಡಿಕೇರಿಯ ಅಜಾದ್ ನಗರದ ಎಂ.ಎಂ.ಮೊಹಮ್ಮದ್ ಅವರ ಪುತ್ರ ಎಂ.ಎಂ.ವಾಸಿಂ (29) ಬಂಧಿತ ಆರೋಪಿಗಳು. ಇನ್ನು ಮೂವರು ಇವರೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿರುವವರನ್ನು ಬಂದಿಸಿಬೇಕಾಗಿದೆ ಎಂದು ತಿಳಿಸಿದರು.

ಕಳ್ಳತನ ಹಣದಿಂದ ಖರೀದಿಸಿದ ಬಲೆನೋ ಕಾರು (ಕೆಎ 01 ಎಂಎಂ 7724) ಮಾರುತಿ ಆಲ್ಟೋ ಕಾರು ಕೆಎ 02 ಪಿ 5378) ಮಾರುತಿ 800 (ಕೆಎ 40 ಎಂ 418) ವಶಪಡಿಸಿಕೊಳ್ಳಲಾಗಿದೆ.

ಇವರ ಬಂಧನದಿಂದ ಕುಶಾಲನಗರ ವ್ಯಾಪ್ತಿಯ 2, ನಾಪೋಕ್ಲು ವ್ಯಾಪ್ತಿಯ 2, ವೀರರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ 1 ಪ್ರಕರಣ ಭೇದಿಸಲಾಗಿದೆ. ಎಸ್ಪಿ, ಸಹಾಯಕ ಎಸ್ಪಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವೃತ್ತ ನಿರೀಕ್ಷಕರಾದ ಬಿ.ಜಿ.ಮಹೇಶ್ ಮತ್ತು ಜಿ.ಎನ್. ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪಿಎಸೈ ಗಳಾದ ಅಪ್ಪಾಜಿ, ಭಾರತಿ, ಶ್ರೀಧರ್, ಲೋಹಿತ್, ಎಎಸೈ ವೆಂಕಟೇಶ್, ಗೋಪಾಲ್, ಗಣಪತಿ, ಪೇದೆಗಳಾದ ಸತೀಶ್, ಮಂಜುನಾಥ್, ದಯಾನಂದ, ನಾಗರಾಜ್, ಸುಧೀಶ್ ಕುಮಾರ್, ಪ್ರಕಾಶ್, ಪ್ರವೀಣ್, ಸಂದೇಶ್, ದಿವೇಶ್, ರಂಜಿತ್, ಗಣೇಶ್, ಸಹನಾ, ಶರ್ಮಿಳಾ, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕರಾದ ರಾಜು, ಅರುಣ್, ಯೋಗೀಶ್ ಮತ್ತು ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಇಲಾಖೆ ವತಿಯಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ನಗದು ಘೋಷಣೆ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!