ಪ್ರತಿಭಟನೆ

ಹಿಂದೂ ಮುಖಂಡರ ಗಡಿಪಾರು ಆದೇಶ ವಿರೋಧಿಸಿ ಕುಶಾಲನಗರದಲ್ಲಿ‌ ಪ್ರತಿಭಟನೆ

ಕುಶಾಲನಗರ, ಫೆ 04: ಹಿಂ.ಜಾ.ವೇ. ಹಿಂದು ಯುವ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಹಾಗೂ ಮಡಿಕೇರಿ ನಗರ ಸಭಾ ಸದಸ್ಯ ಮತ್ತು ನಗರ ಬಿ.ಜೆ.ಪಿ. ಯ ಉಪಾಧ್ಯಕ್ಷ ಕವನ್ ಕಾವೇರಪ್ಪ ಅವರುಗಳನ್ನು ಗಡಿಪಾರು ಮಾಡಬಾರದೆಂದು ಒತ್ತಾಯಿಸಿ ಕುಶಾಲನಗರ ತಹಶೀಲ್ದಾರ್ ಕಛೇರಿ ಮುಂದೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಹಿಂದೂ ಸಮಾಜದ ಕಾರ್ಯಕರ್ತರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.ಕುಶಾಲನಗರ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರ ಮೂಲಕ ಮೇಲಾಧಿಕಾರಿಗಳಿಗೆ ಗಡಿಪಾರು‌ ಮಾಡದಂತೆ ಆಗ್ರಹಿಸಿ ಮನವಿ ನೀಡಲಾಯಿತು.

ಹಿಂಜಾವೇ ಕುಶಾಲನಗರ ತಾಲೂಕು ಸಂಚಾಲಕ ಹರೀಶ್ ಎಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ರಾಜೀವ್, ಚೇತನ್, ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್ ರಾಜ್, ಯುವ ಮೋರ್ಚಾದ ಸುಮನ್, ಸಹ ಸಂಚಾಲಕ್ ಪ್ರವೀಣ್, ಪ್ರಮುಖರಾದ ಪ್ರಜ್ವಲ್, ರೂಪೇಶ್, ಅಭಿಷೇಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!