ಕುಶಾಲನಗರ, ಜ 21: ಸೋಮವಾರಪೇಟೆ ಉಪವಿಭಾಗದ ಕುಶಾಲನಗರ ಸಂಚಾರ ಪೊಲೀಸ್ ರಾಣಾ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ:2023 ಕಾರ್ಯಕ್ರಮ ಕಾರು ನಿಲ್ದಾಣದಲ್ಲಿ ನಡೆಯಿತು.
ಕುಶಾಲನಗರ ಜೆಎಂಎಫ್ ಸಿ ನ್ಯಾಯಾಲಯದ ಸರಕಾರಿ ಸಹಾಯಕ ಅಭಿಯೋಜಕರಾದ, ಅಡಿಷನಲ್ ಸಿವಿಲ್ ಜಡ್ಜ್ ಜಾನಕಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಸ್ತೆ ಸಂಚಾರ ನಿಯಮಗಳು, ಸುರಕ್ಷತಾ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಸವಾರನಿಗೆ ಕನಿಷ್ಠ ಅರಿವು ಅಗತ್ಯ. ಸಂಚಾರಿ ನಿಯಮಗಳ ಬಗ್ಗೆ ನಿರ್ಲಕ್ಷ್ಯ ತೋರದೆ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕಾರ ನೀಡಬೇಕಿದೆ ಎಂದರು.
ಮಡಿಕೇರಿ ಪ್ರಾದೇಶಿಕ ಸಾರಿಗೆ ನಿರೀಕ್ಷಕ ಎಂ.ಶಿವಕುಮಾರ್ ಮಾತನಾಡಿ, ರಸ್ತೆ ಸುರಕ್ಷತೆ ಕ್ರಮಗಳನ್ನು ಪ್ರತಿನಿತ್ಯ ಪಾಲಿಸುವಂತಾಗಬೇಕು ಎಂದು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು.
ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಎಂ.ಎನ್.ಶಿವಕುಮಾರ್ ಮಾತನಾಡಿ, ಕೊಡಗಿನಲ್ಲಿ ಮದ್ಯಪಾನದಿಂದ ಉಂಟಾಗುತ್ತಿರುವ ಅಪಘಾತ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ನಮ್ಮ ಕೈಯಿಂದಲೇ ಜೀವಕ್ಕೆ ಸಂಚಕಾರ ತಂದುಕೊಳ್ಳಬಾರದು ಎಂದು ಎಚ್ಚರಿಸಿದರು.
ಕುಶಾಲನಗರ ಸಂಚಾರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಗೀತಾ, ಚಂದ್ರಪ್ಪ, ಎಎಸ್ ಐ ಸುಕನ್ಯ ಸೇರಿದಂತೆ ಸಿಬ್ಬಂದಿಗಳಾದ ಸ್ವಾಮಿ, ರಮೇಶ್, ಇಮ್ರಾನ್, ರಶ್ಮಿ, ಸುಧೀಶ್ ಸೇರಿದಂತೆ ಆಟೋ,ಕಾರು ಚಾಲಕರು,ಮಾಲೀಕರು ಇದ್ದರು.
Back to top button
error: Content is protected !!