ಕುಶಾಲನಗರ,ಜ 21: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ರ ಅಂಗವಾಗಿ ಶನಿವಾರ ನಡೆದ ಸ ಸೌಹಾರ್ದ ಪಂದ್ಯಾವಳಿಯಲ್ಲಿ 10 ತಂಡಗಳ ಮಾಲೀಕರ ಟೀಂ ಓನರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಕುಶಾಲನಗರ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆಯಿತು.
ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆದ ಸೌಹಾರ್ದ ಪಂದ್ಯಾವಳಿಯಲ್ಲಿ ಜನಪ್ರತಿನಿಧಿಗಳ ತಂಡ, ಆಯೋಜಕರ ತಂಡ, ಟೀಂ ಓನರ್ಸ್ ತಂಡ, ಪತ್ರಕರ್ತರ ತಂಡಗಳ ನಡುವೆ ಲೀಗ್ ಮ್ಯಾಚ್ ನಡೆಯಿತು.
ಇದರಲ್ಲಿ ಫೈನಲ್ ಪ್ರವೇಶಿಸಿದ ವಿನೋದ್ ನಾಯಕತ್ವದ ಪತ್ರಕರ್ತರ ತಂಡವನ್ನು ಫಯಾಜ್ ನಾಯಕತ್ವದ ಟೀಂ ಓನರ್ಸ್ ತಂಡ ಮಣಿಸಿ ಪ್ರಥಮ ಸ್ಥಾನ ಗಳಿಸಿತು. ಪತ್ರಕರ್ತರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಗಳಿಗೆ ಕ್ಲಬ್ ಅಧ್ಯಕ್ಷ ಸುಮೇರ್ ಬಹುಮಾನ ವಿತರಣೆ ಮಾಡಿದರು.
Back to top button
error: Content is protected !!