ಕುಶಾಲನಗರ, ಜ 21: ವೀರಶೈವ ಸಮಾಜದ ಆಶ್ರಯದಲ್ಲಿ ಗುಡ್ಡೆಹೊಸೂರು ಗ್ರಾಮದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸ್ವಾಮಿಜೀಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವೃತ್ತದ ಬಳಿ ಸ್ವಾಮೀಜಿಯವರ ಭಾವಚಿತ್ರವಿಟ್ಟು ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ನಂತರ ನೆರೆದಿದ್ದ ಭಕ್ತ ವೃಂದ ಪೂಜಾಕಾರ್ಯ ನಡೆಸಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ,ಕಾರ್ಯದರ್ಶಿ ಸಾಂಭಶಿವಮೂರ್ತಿ ಮತ್ತು ಬೊಳ್ಳೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಸಿ.ಮಲ್ಲಿಕಾರ್ಜುನ, ನಿರ್ದೇಶಕರಾದ
ಬಿ.ಎನ್.ಶುಭಶೇಖರ್, ಬಿ.ಎಂ,ಪ್ರದೀಪ್ ಸೇರಿದಂತೆ ಸಾರ್ವಜನಿಕರು ಈ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರಿಗೆ
ಅನ್ನಸಂತರ್ಪಣೆ ಕಾರ್ಯ ನಡೆಯಿತು.
Back to top button
error: Content is protected !!