ಕುಶಾಲನಗರ, ಜ 11: ಹೆಬ್ಬಾಲೆ ಕಳ್ಳತನ ಪ್ರಕರಣ ಯಶಸ್ವಿಯಾಗಿ ಬೇಧಿಸಿದ ಕುಶಾಲನಗರ ಪೊಲೀಸರಿಗೆ ಕೊಡಗು ಎಸ್ಪಿ ಎಂ.ಎ.ಅಯ್ಯಪ್ಪ ಪ್ರಶಂಶಿಸಿದರು.
ಕಳ್ಳತನ ನಡೆದ ವಾರದೊಳಗೆ ಪ್ರಕರಣ ಬೇಧಿಸಿದ ಸೋಮವಾರಪೇಟೆ ಉಪ ವಿಭಾಗ ಕುಶಾಲನಗರ ವೃತ್ತ ಡಿವೈಎಸ್ಪಿ ಗಂಗಾಧರ್, ಸಿಐ ಮಹೇಶ್ ಮತ್ತು ತಂಡಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದರು.
ಹೆಬ್ಬಾಲೆಯಲ್ಲಿ ಮನೆಕಳ್ಳತನ ಪ್ರಕರಣದ ಆರೋಪಿ ಬಂಧನ ಮಾಡಲಾಗಿದೆ.ಹೆಬ್ಬಾಲೆ ಗ್ರಾಪಂ ಪೌರಕಾರ್ಮಿಕ ಮಂಜುನಾಥ್ (32) ಬಂಧಿತ ಆರೋಪಿ.ಮೂಲತಃ ಕೆಆರ್ ನಗರದ ಲಕ್ಷ್ಮಣ ಎಂಬವರ ಪುತ್ರ ಮಂಜುನಾಥ್ ಹೆಬ್ಬಾಲೆ ಗ್ರಾಪಂ ನ ಪೌರಕಾರ್ಮಿಕ ಕೆಲಸ ಮಾಡುತ್ತಿದ್ದ. ಕಳೆದ 4 ರಂದು ಹೆಬ್ಬಾಲೆ ನಾರಾಯಣ ಎಂಬವರ ಮನೆ ಕಳ್ಳತನ ಮಾಡಿ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದಿದ್ದ ಪ್ರಕರಣ ಇದಾಗಿದೆ. ಕಳ್ಳತನ ಮಾಡಿದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
Back to top button
error: Content is protected !!