ಕುಶಾಲನಗರ, ಜ 12: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 2ನೇ ವರ್ಷದ ಕೊಡಗು ಐಪಿಎಲ್ ಟೂರ್ನಿ ಜನವರಿ 22 ರಂದು ಅದ್ದೂರೊಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಗೌರವ ಸಲಹೆಗಾರ ಪ್ರಮೋದ್ ಮುತ್ತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ 4 ದಿನಗಳ ಕಾಲ ಟೂರ್ನಿ ನಡೆಯಲಿದೆ. ಕೊಡಗು ಜಿಲ್ಲೆಯಾದ್ಯಂತ ಆಟಗಾರರು ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.
ಸದಸ್ಯ ಎಸ್.ಆದಂ ಮಾತನಾಡಿ,
ಈಗಾಗಲೆ ಬಿಡ್ಡಿಂಗ್ ಮೂಲಕ ತಂಡಗಳ ಖರೀದಿ ಪ್ರಕ್ರಿಯೆ ನಡೆದಿದೆ. ಒಟ್ಟು 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ರಾಜ್ಯ, ಹೊರ ರಾಜ್ಯಗಳಿಂದ ಒಂದು ತಂಡದಲ್ಲಿ 3 ಅತಿಥಿ ಆಟಗಾರರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಥಮ 1 ಲಕ್ಷ, ದ್ವಿತೀಯ 50 ಸಾವಿರ, ತೃತೀಯ 25 ಸಾವಿರ, ನಾಲ್ಕನೆ ಬಹುಮಾನವಾಗಿ 15 ಸಾವಿರ
ನಗದು ಬಹುಮಾನ ಜೊತೆಗೆ ಚಿನ್ನದಲ್ಲಿ ಐಪಿಎಲ್ ಎಂದು ಮುದ್ರಿತವಾದ ಟ್ರೋಪಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕ್ಲಬ್ ಖಜಾಂಚಿ ಚಂದು ಮಾತನಾಡಿ, ಆಟಗಾರರಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಪ್ರತಿ ತಂಡದವರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು. ಉದ್ಘಾಟನಾ ಸಮಾರಂಭ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಐಶ್ವರ್ಯ ಕಾಲೇಜು ಸಂಸ್ಥಾಪಕ ಪುಲಿಯಂಡ ರಾಮ್ ದೇವಯ್ಯ, ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಸೈಜನ್ ಪೀಟರ್ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ ಎಂದರು.
ಇದೇ ಸಂದರ್ಭ ಕ್ರೀಡಾಕೂಟದ ಕರಪತ್ರ ಬಿಡುಗಡೆಯಾಯಿತು.ಕ್ಲಬ್ ಅಧ್ಯಕ್ಷ ಎಚ್.ಕೆ.ಸುಮೇರ್, ಉಪಾಧ್ಯಕ್ಷ ಆರಿಫ್ ಇದ್ದರು.
Back to top button
error: Content is protected !!