ಕುಶಾಲನಗರ ಮಾ.12: ಈಗಿನ ಯುವ ಜನಾಂಗ ಡೇಶಾಭಿವೃದ್ಧಿಯ ಗುರಿ ಹೊಂದಬೇಕು. ಆ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುರಿ ಮುಟ್ಟುವ ಕಡೆಗೆ ಸಾಕಷ್ಟು ಪರಿಶ್ರಮ ಮತ್ತು ಪೂರ್ವ ತಯಾರಿ ಮಾಡಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಕರೆ ನೀಡಿದರು.
ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಬುಧವಾರ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂಸಾರ, ಊರು, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಕಟ್ಟಿ ಬೆಳೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೇಶದಲ್ಲಿ ಮಹಿಳಾ ಐಎಎಸ್ ಅಧಿಕಾರಿಗಳು ಕೇವಲ ಶೇಕಡಾ ಎಂಟು. ಉಳಿದ ಶೇ.92 ಪುರುಷರೇ ಇದ್ದಾರೆ. ಮಹಿಳಾ ನ್ಯಾಯಾಧೀಶರಾಗಿ ಕೇವಲ ಶೇ.7 ಇದ್ದಾರೆ. ಶೇ.17 ಬ್ಯಾಂಕ್ ಗಳಲ್ಲಿ ಯುವತಿಯರು ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಬೇಕು ಎಂದದಾಗ ಯುವತಿಯರು ಓದುವುದರ ಜೊತೆಗೆ ಸಾಮಾಜಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕೆಂದರು. ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಗಬೇಕು. ಮಹಿಳೆಯರು ಯಾವುದಾದರೂ ಒಂದು ವಿಚಾರದಲ್ಲಿ ಮಾಸ್ಟರ್ ಗಳಾಗಬೇಕು. ಆಗ ಮಾತ್ರ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದ ಹೇಳಿದಂತೆ ದೇಶದ ಅಭಿವೃದ್ಧಿಗೆ ಯುವಕರ ಶಕ್ತಿ ಕ್ರೂಡಿಕರಣ ಆಗಬೇಕು. ಅದರಲ್ಲೂ ಮಹಿಳೆಯರು ಸ್ವಾವಲಂಬಿಗಳಾಗಿ ಅರ್ಥಿಕವಾದ ಸಧೃಡ ದೇಶ ನಿರ್ಮಿಸಬೇಕೆಂದು ಚಿತ್ರ ರಮೇಶ್ ಕರೆ ನೀಡಿದರು.
ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಲಿಂಗಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಹರೀಶ್, ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಹಾಯಕ ಆಯುಕ್ತೆ ಸುಲೋಚನಾ, ಪ್ರೊಬ್ಸ್ ಅಧ್ಯಕ್ಷ ದರ್ಶನ್, ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!