ಕುಶಾಲನಗರ, ಜ 15:
ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಹಾಗೂ ಕೂಡುಮಂಗಳೂರು ಜೋಡಿ ಗ್ರಾಮಗಳ ದೊಡ್ಡಮ್ಮ ತಾಯಿ ಗ್ರಾಮ ದೇವತಾ ಸಮಿತಿ ಅಧ್ಯಕ್ಷರಾಗಿ ಕೂಡ್ಲೂರಿನ ಉದ್ಯಮಿ ಕೆ.ಎನ್.ಪವನ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಕೂಡುಮಂಗಳೂರು ಗ್ರಾಮದ ವಿ.ಎಂ.ಮಂಜುನಾಥ್, ಕಾರ್ಯದರ್ಶಿಯಾಗಿ ಎಂ.ಡಿ.ಹರೀಶ್ ಹಾಗೂ ಕೋಶಾಧಿಕಾರಿಯಾಗಿ ಕೂಡ್ಲೂರಿನ ಕೆ.ಪಿ.ಕೃಷ್ಣ ಆಯ್ಕೆಯಾಗಿದ್ದಾರೆ.
ಉಳಿದಂತೆ ಎರಡೂ ಗ್ರಾಮಗಳಿಂದ 24 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು ದೇವಾಲಯದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಪವನ್ ಕುಮಾರ್ ಹೇಳಿದರು.
Back to top button
error: Content is protected !!