ಕುಶಾಲನಗರ, ಜ 19: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ 35 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ಮತ್ತು ಚಂಡಿಕಾ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜನವರಿ 25 ರಿಂದ 27 ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ಡಿ ವಿ ರಾಜೇಶ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೇಲಂತಸ್ತಿನ ಗೋಪುರದ ಉದ್ಘಾಟನೆಯನ್ನು ಹಂಪೆ ಹೇಮಕೂಟದ ಸ್ವಾಮೀಜಿ ಶ್ರೀ ದಯಾನಂದಪುರಿ ಮಹಾಸ್ವಾಮಿನವರು ನೆರವೇರಿಸಲ್ಲಿದ್ದಾರೆ. 25 ರಂದು ಅಷ್ಠ ಪುರೋಹಿತರಿಂದ ಪಾರಾಯಣ, ವಾಸ್ತು ರಕ್ಷೊಫ್ನ ಹೋಮ, ದಿಗ್ಭಲಿ, ಸಂಕಲ್ಪ ಪೂಜೆ, ನಡೆಯಲಿದೆ, 26 ರಂದು 5-30 ಕ್ಕೆ ಗಣಪತಿ ಹೋಮ, ಕಲಾಹೋಮ, ನಂತರ 6.30. ಗಂಟೆಗೆ ಕಾವೇರಿ ನದಿಯಿಂದ ಮೆರವಣಿಗೆಯೊಂದಿಗೆ ಕಳಸ ತರುವುದು, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ನಂತರ ಮೇಲಂತಸ್ತಿನ ಗೋಪುರ ಉದ್ಘಾಟನೆ ನಡೆಯಲಿದೆ. ನಂತರ 2.30 ಗಂಟೆಗೆ ಸಭಾ ಕಾರ್ಯಕ್ರಮವು ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಲಿದ್ದಾರೆ. ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಪಿ.ಕಲಬುರ್ಗಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಮಾಜಿ ಶಾಸಕ ನೇಕಾರರ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಪಾಲ್ಗೊಳ್ಳಲಿದ್ದು, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ ವಿದ್ಯುತ್ ದೀಪ ಅಲಂಕೃತವಾದ ಭವ್ಯ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮುಖ್ಯ ಬೀದಿಯ ಮೂಲಕ ಮಾರಮ್ಮ ದೇವಾಲಯದವರೆಗೆ ಸಾಗಿ ನಂತರ ಸ್ವ ಸ್ಧಾನ ಸೇರಲಿದೆ.27 ರಂದು ದೇವಾಲಯದ ಆವರಣದಲ್ಲಿ ಚಂಡಿಕಾ ಹೋಮ ನಡೆಯಲಿದೆ ಎಂದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ. ಟಿ.ವಿಜೇಯೇಂದ್ರ ಉಪಾಧ್ಯಕ್ಷ ಡಿ.ಆರ್.ಸೋಮಶೇಖರ್, ಡಿ.ಕೆ.ಮಹೇಶ್, ಸಹ ಕಾರ್ಯದರ್ಶಿ ಡಿ.ವಿ.ಚಂದ್ರು, ಖಜಾಂಚಿ ಡಿ.ಆರ್.ಕೃಷ್ಣಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ ಇದ್ದರು.
Back to top button
error: Content is protected !!