ಕುಶಾಲನಗರ, ಜ 15: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪನಾಯಕ್ ಮೇಲೆ ನಡೆದ ಹಲ್ಲೆ ಪ್ರಕರಣ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ, ಒತ್ತಡದಿಂದ ಭಾನುವಾರ ದೂರು ದಾಖಲಿಸಲಾಗಿದೆ.
ಎರಡು ದಿನದ ಬಳಿ ದೂರು ದಾಖಲಿಸಿದ ಮುಖ್ಯಾಧಿಕಾರಿ ಶಿವಪ್ಪನಾಯಕ್ ತಮ್ಮ ಮೇಲೆ ನಡೆದ ಹಲ್ಲೆ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿಲ್ಲ.
ಕೇವಲ ಬೆದರಿಕೆ, ಗಲಾಟೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಕೃಷ್ಣ ಎಂಬವರ ವಿರುದ್ದ ಹುಣಸೂರು ಠಾಣೆಯಲ್ಲಿ ದೂರು ನೀಡಲಾಗಿದೆ.
ಅನಧಿಕೃತ ಲೇಔಟ್ ಒಂದನ್ನು ಅಧಿಕೃತ ಮಾಡಿಕೊಡುವ ವಿಚಾರವಾಗಿ ಮನೆ ಬಳಿ ಬಂದು ಗಲಾಟೆ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಮಾತ್ರ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Back to top button
error: Content is protected !!