ಟ್ರೆಂಡಿಂಗ್

ಹನುಮ‌ಜಯಂತಿ ಶೋಭಾಯಾತ್ರೆ: ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ ಪ್ರಥಮ ಸ್ಥಾನ‌

ತೃತೀಯ ಸ್ಥಾನ‌ ಪಡೆದ ಮಂಟಪ
ಕುಶಾಲನಗರ, ಡಿ 06: ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಹಮನು ಜಯಂತಿ ಕಾರ್ಯಕ್ರಮ ಹಿನ್ನಲೆಯಲ್ಲಿ ನಡೆದ
ಮಂಟಪಗಳ ಶೋಭಾ ಯಾತ್ರೆಯಲ್ಲಿ ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿಯ ಮಂಟಪ‌ ಪ್ರಥಮ ಸ್ಥಾನ‌ ಪಡೆದು ರೂ 15 ಸಾವಿರ ನಗದು ಪಡೆದುಕೊಂಡಿದೆ.
ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿ ಹಾಗೂ ಗೆಳೆಯರ ಬಳಗದ ಮಂಟಪಕ್ಕೆ ದ್ವಿತೀಯ ಸ್ಥಾನ, ಗುಡ್ಡೆಹೊಸೂರು-ಬಸವನಹಳ್ಳಿಯ ಶ್ರೀ ವೀರಾಂಜನೇಯ ಸೇವಾ ಸಮಿತಿ, ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮಂಟಪಕ್ಕೆ ತೃತೀಯ ಸ್ಥಾನ ಲಭಿಸಿದೆ. ದ್ವಿತೀಯ ರೂ 10 ಸಾವಿರ, ತೃತೀಯ ರೂ 7500 ನಗದು ಬಹುಮಾನ ಲಭಿಸಿದೆ.
ಶೋಭಾಯಾತ್ರೆಯಲ್ಲಿ ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ, ಮಾದಾಪಟ್ಟಣ, ಗುಡ್ಡೆಹೊಸೂರು, ಕೂಡಿಗೆ ಗ್ರಾಮಗಳಿಂದ ವಿದ್ಯುತ್‌ ಅಲಂಕೃತ ಭವ್ಯ ಮುಂಟಪಗಳು ಪಾಲ್ಗೊಂಡಿದ್ದವು.
ಮಂಟಪಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲ್ಗೊಂಡ 7 ಮಂಟಪಗಳನ್ನು ಪ್ರಥಮ‌ ಮೂರು ಬಹುಮಾನ ಹೊರತುಪಡಿಸಿ ಉಳಿದ ಮಂಟಪಗಳಿಗೂ‌ ರೂ 5 ಸಾವಿರ ನಗದನ್ನು ಸಮಧಾನಕರ ಬಹುಮಾನವಾಗಿ‌ ನೀಡಲಾಗಿದೆ. ಬಹುಮಾನಗಳನ್ನು ಆಯ್ಕೆ ಮಾಡಲು, ಕುಶಾಲನಗರದ ಹಿರಿಯರ, ಸಮಾಜ ಸೇವಕರ ಒಂದು ತಂಡವನ್ನು ರಚಿಸಿ ಆ ತಂಡದ ಮೂಲಕ ಉತ್ತಮ‌ ಮಂಟಪಗಳ ಅಯ್ಕೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಏಳು ವಿದ್ಯುತ್ ಅಲಂಕೃತ ‌ಮಂಟಪಗಳು ಭಾಗವಹಿಸಿದ್ದವು. ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಶ್ರೀರಾಮ ಮಂದಿರದ ಹಿಂದೂ ಜಾಗರಣ ವೇದಿಕೆ ಹಾಗೂ ಮಾದಾಪಟ್ಟಣದ ಶ್ರೀ ರಾಮದೂತ ಜಯಂತಿ ಆಚರಣೆ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ,  ಗುಮ್ಮನಕೊಲ್ಲಿಯ ಶ್ರೀ ಬಸವೇಶ್ವರ ಯುವಕ ಸಂಘ, ಗೋಪಾಲ್ ಸರ್ಕಲ್ ನ ಶ್ರೀ ಗಜಾನನ ಯುವಕ ಸಂಘದ ಮಂಟಪಗಳು ಸೇರಿದಂತೆ ರಥಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉತ್ಸವ‌ ಮೂರ್ತಿ‌ ಪಾಲ್ಗೊಂಡಿತ್ತು.
ಪ್ರತಿ‌ ಮಂಟಪಗಳಿಗೂ‌ ಬಹುಮಾನದ ಜೊತೆ ಆಂಜನೇಯ ‌ಮೂರ್ತಿಯನ್ನು‌ ಉಡುಗೊರೆ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!