ಕುಶಾಲನಗರ, ನ 23: ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2022- 23ನೇ ಸಾಲಿನ ರಾಜ್ಯಮಟ್ಟದ ಕಬ್ಬಡಿ ಕ್ರೀಡಾಕೂಟವು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನ.24 ರಂದು ನಡೆಯಲಿದ್ದು, ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಶೂ ಗಳನ್ನು ದಾನಿಗಳಾದ ಎನ್. ಟಿ. ಜೋಸೆಫ್ ಕೊಡುಗೆ ನೀಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು ಹಾಗೂ ಉಪನ್ಯಾಸಕ ಫಿಲಿಪ್ ವಾಸ್ , ನಾಗೇಶ್ , ಮೋಹನ್, ರಾಜು, ಗುರುಸ್ವಾಮಿ , ಶಾಂತಿ ,ಕೃಪಾ ,ಪ್ರಶಾಂತಿ, ಪ್ರತಿಭಾರಾಜ್ ,ಮಂಜುಳಾ ಉಪಸ್ಥಿತರಿದ್ದರು.
Back to top button
error: Content is protected !!