ಕುಶಾಲನಗರ: ನ 05: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮವು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗ್ರಾಮದ ವ್ಯಾಪ್ತಿಯ ಜನತೆಗೆ ಅನುಕೂಲವಾಗವ ದೃಷ್ಟಿಯಿಂದ ಆಯಾ ಗ್ರಾಮಗಳಲ್ಲಿ ಪೌತಿ ಖಾತೆಯ ಬದಲಾವಣೆ, ಪಟ್ಟೆದಾರಿಕೆ, ಜನತೆಯ ಪಹಣಿಯ ಬದಲಾವಣೆ ಸೇರಿದಂತೆ ವಿವಿಧ ತಿದ್ದುಪಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ಗಳಿಂದ ಅರ್ಜಿಗಳನ್ನು ಪಡೆಯಲಾಯಿತು.
ಗ್ರಾಮದ 50 ಕ್ಕೂ ಹೆಚ್ಚು ರೈತರ ಅರ್ಜಿಗಳನ್ನು ಪರಿಶೀಲಿಸಿ ಪಡೆಯಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಪೀರ್ ಮಹಮ್ಮದ್ ಹಾಜರಿದ್ದರು.
Back to top button
error: Content is protected !!