ಕಾರ್ಯಕ್ರಮ

ಅಮೃತ ನಿರ್ಮಲ ನಗರ ಯೋಜನೆ: ಕಾವೇರಿ, ರಾಣಿಪೇಟೆ, ಕನ್ನಿಕಾ ಬಡಾವಣೆಗಳಲ್ಲಿ ಉದ್ಯಾನ ಉದ್ಘಾಟನೆ

ಕುಶಾಲನಗರ, ನ 05:
ಅಮೃತ ನಿರ್ಮಲ ನಗರ ಯೋಜನೆಯಡಿ ನಗರದ ಕಾವೇರಿ, ರಾಣಿಪೇಟೆ ಮತ್ತು ಕನ್ನಿಕಾ ಬಡಾವಣೆಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಉದ್ಯಾನವನವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶನಿವಾರ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಪೌರಾಯುಕ್ತರಾದ ವಿಜಯ, ನಗರಸಭಾ ಸದಸ್ಯರು ಇತರರು ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರದ ಅಭಿವೃದ್ಧಿಗೆ ಉದ್ಯಾನವನವು ಸಹ ಒಂದು. ಪ್ರತೀ ಬಡಾವಣೆಯಲ್ಲಿಯೂ ಸಹ ಉದ್ಯಾನವನ ನಿರ್ಮಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಉದ್ಯಾನವನದಿಂದ ಮಕ್ಕಳ ಕ್ರೀಯಾಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಹಿರಿಯ ನಾಗರಿಕರಿಗೂ ಅನುಕೂಲವಾಗಲಿದೆ ಎಂದರು.
ಉದ್ಯಾನವನ ಅಭಿವೃದ್ಧಿ ನಿಟ್ಟಿನಲ್ಲಿ ಸ್ಥಳೀಯವಾಗಿ ಎಲ್ಲರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಶಾಸಕರು ಸಲಹೆ ಮಾಡಿದರು.
ಉದ್ಯಾನವನದಲ್ಲಿರುವ ಉಯ್ಯಾಲೆ, ಜಿಮ್ಮು, ಮತ್ತಿತರ ಚಟುವಟಿಕೆಗಳಲ್ಲಿ ಶಾಸಕರು ಲವಲವಿಕೆಯಿಂದ ಪಾಲ್ಗೊಂಡು ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!