ಕುಶಾಲನಗರ, ಆ. 25: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೂಡಿಗೆ ಮತ್ತು ಹೆಬ್ಬಾಲೆ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಕ್ರೀಡಾಕೂಟವು ಕೂಡಿಗೆ ಡಯಟ್ ಮೈದಾನದಲ್ಲಿ ಆರಂಭಗೊಂಡಿತು.
ಕ್ರೀಡಾಕೂಟವನ್ನು ಜಿಲ್ಲಾ ದೈಹಿಕ ಶಿಕ್ಷಕ ಪರಿವೀಕ್ಷಕರಾದ ಸದಾಶಿವಯ್ಯ ಎಸ್ ಪಲ್ಲೆದ್ ಉದ್ಘಾಟನೆಯನ್ನು ನೆರವೇರಿಸಿ ,ಮಾತಾನಾಡುತ್ತಾ ವಿದ್ಯಾರ್ಥಿಗಳಿಗೆ ಇಂತಹ ಕ್ರೀಡಾಕೂಟದ ಮೂಲಕ ಶಿಸ್ತು,ಸಂಯಮ,ಜೊತೆಗೆ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ, ಕ್ರೀಡೆಯು ತನ್ನ ಬದುಕಿನ ಜೀವನಕ್ಕೆ ಪೂರಕವಾದ ಅಂಶಗಳನ್ನು ಒದಗಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ ಮಾತಾನಾಡಿ ಪ್ರಾಥಮಿಕ ಹಂತದಲ್ಲಿ ತನ್ನ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಅದರ ಮೂಲಕ ಮುಂದುವರಿದು ಉನ್ನತ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಪ್ರಾಥಮಿಕ ಹಂತದ ಕ್ರೀಡೆ ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧ್ವಜವಂದನೆ ಮತ್ತು ಕ್ರೀಡಾ ಜ್ಯೋತಿ ಸ್ವೀಕರಿಸಿದ ಕೂಡಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್ ಮಾತಾನಾಡಿ ವಿದ್ಯಾರ್ಥಿಗಳು ಸೋಲಿಗೆ ಹೆದರುವ ಅವಶ್ಯಕತೆ ಇಲ್ಲಾ, ಪ್ರಯತ್ನದಲ್ಲಿ ವಿಶ್ವಾಸವಿರಲ್ಲಿ ಅದೇ ಮುಂದಿನ ಕ್ರಿಯಾ ದಾರಿ ಎಂದರು.
ವೇದಿಕೆಯಲ್ಲಿ ಕೂಡಿಗೆ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶಾಂತಕುಮಾರ್, ಹೆಬ್ಬಾಲೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆದರ್ಶ, ಕೂಡಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ್, ಮೊರಾರ್ಜಿ ದೇಸಾಯಿ ಶಾಲೆ ಶಿಕ್ಷಕ ನಾಗೇಂದ್ರ,ಕ್ರೀಡಾಕೂಟದ ಆಯೋಜಕರಾದ ಜ್ಞಾನೋದಯ ಶಾಲೆಯ ಮುಖ್ಯ ಶಿಕ್ಷಕಿ ಸೆಲ್ವಿನ್ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ 22. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರ ದೈಹಿಕ ಶಿಕ್ಷಕರ ವೃಂದ, ಹಾಗೂ ಜ್ಞಾನೋದಯ ಶಾಲೆ ಎಲ್ಲಾ ಶಿಕ್ಷಕರ ವೃಂದ ಭಾಗವಹಿಸಿದರು. ಶಿಕ್ಷಕ ಯೋಗೇಶ್ ಸ್ವಾಗತಿಸಿ, ವಂದಿಸಿದರು.
Back to top button
error: Content is protected !!