ಕುಶಾಲನಗರ, ನ 05:
ಕುಶಾಲನಗರದ ಹಿಂದೂ ರುದ್ರ ಭೂಮಿಗೆ ಅಂತ್ಯಕ್ರಿಯೆಗೆಂದು ಆಗಮಿಸುವವರು ಕುಳಿತುಕೊಳ್ಳಲು ಸಹಕಾರಿಯಾಗಲೆಂದು ಕುಶಾಲನಗರದ ವಿ.ಜೆ.ನವೀನ್ ಮತ್ತು ಸ್ನೇಹಿತರ ತಂಡ ಸ್ಲ್ಯಾಬ್ ಅಳವಡಿಕೆ ಮಾಡಿದರು.
ಅಂತ್ಯ ಸಂಸ್ಕಾರ ಸಂದರ್ಭ ವಯೋವೃದ್ಧರು, ಆನಾರೋಗ್ಯ ಪೀಡಿತರು ಆಗಮಿಸಿ ಅಂತ್ಯ ಸಂಸ್ಕಾರ ಮುಗಿಯುವವರೆಗೂ ರುದ್ರಭೂಮಿಯಲ್ಲಿ ಇರಬೇಕಾದ ಸಂದರ್ಭ ಕುಳಿತುಕೊಳ್ಳಲು ಹೆಚ್ಚುವರಿಯಾದ ಆಸನದ ವ್ಯವಸ್ಥೆ ಇಲ್ಲದೆ ಸಂಕಷ್ಟ ಪಡುವುದನ್ನು ಕಂಡ ವಿ.ಜೆ. ನವೀನ ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಏಕಕಾಲದಲ್ಲಿ 40 ಮಂದಿ ಕುಳಿತುಕೊಳ್ಳಲು ನೇರವಾಗುವಂತೆ ಇಟ್ಟಿಗೆಗಳನ್ನು ಜೋಡಿಸಿ ಅದರ ಮೇಲೆ ಕಡಪ ಕಲ್ಲು ಅಳವಡಿಸಿ ಆಸನದ ವ್ಯವಸ್ಥೆ ಕಲ್ಪಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಈ ಆವರಣದಲ್ಲಿ ಕುಡಿಯಲು, ಕೈಕಾಲ ತೊಳೆಯಲು ನೀರಿನ ಸೌಕರ್ಯ ಇಲ್ಲದಿರುವ ಕಾರಣ ಮುಂದಿನ ದಿನಗಳಲ್ಲಿ ಪ್ರತ್ಯೇಕ ಟ್ಯಾಂಕ್, ಪೈಪ್ ಲೈನ್, ಟ್ಯಾಪ್ ಅಳವಡಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನವೀನ್ ತಿಳಿಸಿದರು.
Back to top button
error: Content is protected !!