ಸ್ಪಾ, ಬಾಡಿ ಮಸಾಜ್ ಸೆಂಟರ್ ಗಳಲ್ಲಿ ಸದ್ದಿಲ್ಲದೆ ನಡೆಯುತ್ತಿವೆ ಅಕ್ರಮ ಸೇವೆಗಳು.
ಕುಶಾಲನಗರ, ಅ 31:ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬಾಡಿ ಮಸಾಜ್ ಮತ್ತು ಸ್ಪಾ ಸೆಂಟರ್ ಗಳಲ್ಲಿ ಗೌಪ್ಯವಾಗಿ ಅಕ್ರಮ ಸೇವೆಗಳ ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಮುಳ್ಳುಸೋಗೆ ಹಾಗೂ ಕುಶಾಲನಗರ ವ್ಯಾಪ್ತಿಯಲ್ಲಿರುವ ಕೆಲವು ಇಂತಹ ಸೆಂಟರ್ ಗಳಲ್ಲಿ ಸ್ಥಳೀಯ ಯುವತಿಯರು, ಮಹಿಳೆಯರನ್ನು ಬಳಸಿಕೊಂಡು ನಿಯಮಬಾಹಿರ ಕ್ರಾಸ್ ಮಸಾಜಿಂಗ್ ಸೇವೆಗಳು ಒದಗಿಸಲಾಗುತ್ತಿದೆ. ಹಾಗೂ ಇದನ್ನು ಬಟಾ ಬಯಲಾಗಿ ಸೇವೆ ಒದಗಿಸುವ ಆಮೀಷ ನೀಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿವೆ. ಜನತಾ ಕಾಲನಿಯಲ್ಲಿರುವ ಸ್ಪಾ ಸೆಂಟರ್ ನ ಮಹಿಳೆ ಹಾಗೂ 60 ದಾಡಿದ ವಯಸ್ಕರೊಬ್ಬರು ಬಹಿರಂಗವಾಗಿಯೇ ಗ್ರಾಹಕರಿಗೆ ಬಲೆ ಬೀಸುತ್ತಿರುವುದು ಕಂಡುಬಂದಿದೆ. ಹೋಟೆಲ್, ಲಾಡ್ಜ್ ಮತ್ತಿತರ ಕಡೆಗಳಿಗೆ ತೆರಳಿ ಕ್ರಾಸ್ ಮಸಾಜ್ ಸೇವೆ ಒದಗಿಸುತ್ತೇವೆ ಎಂದು ಕಾರ್ಡ್ ನೀಡಿ ಬರುತ್ತಿರುವ ಬಗ್ಗೆ ವಿಚಾರ ತಿಳಿದುಬಂದಿದೆ. ಕಾನೂನಿನ ಪ್ರಕಾರ ಪುರುಷರಿಗೆ ಮಹಿಳೆಯರು, ಮಹಿಳೆಯರಿಗೆ ಪುರುಷರು ಮಸಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಈ ಸೇವೆ ನೀಡುವ ಹೆಸರಿನಲ್ಲಿ ಅಕ್ರಮ ಲೈಂಗಿಕ ಸೇವೆಗಳು ಕೂಡ ಒದಗಿಸುವ ದಂಧೆ ಕೂಡ ನಡೆದರೂ ಅಚ್ಚರಿಯಿಲ್ಲ ಎಂಬುದು ತಿಳಿದವರ ಅಭಿಪ್ರಾಯ. ಇನ್ನಾದರೂ ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಪರಿಶೀಲನೆ ನಡೆಸಿ ನಿಗಾವಹಿಸುವುದು ಉತ್ತಮ.
Back to top button
error: Content is protected !!