ಆರೋಪ

ವೋಟ್ ಬ್ಯಾಂಕ್ ಗಾಗಿ ರಥಯಾತ್ರೆ: ಸರಕಾರ ವಿರುದ್ದ ಧಿಕ್ಕಾರ ಕೂಗಿದ ಒಕ್ಕಲಿಗ ಸಂಘದವರು

ಕುಶಾಲನಗರ, ಅ 30: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಅಂಗವಾಗಿ ಮೃತ್ತಿಕೆ ಸಂಗ್ರಹ ಕಾರ್ಯಕ್ರಮ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ನಡೆಯಿತು.
ಕುಶಾಲನಗರ ಪಟ್ಟಣ ಪಂಚಾಯ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತಿಕೆ ಸಂಗ್ರಹ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗಿನ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಪಾಲ್ಗೊಂಡಿದ್ದರು.
ಕುಶಾಲನಗರ ಗಣಪತಿ ದೇವಾಲಯ ಮುಂದೆ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಕುಶಾಲನಗರ ಪಪಂ ವತಿಯಿಂದ ಸಂಗ್ರಹಿಸಿ ಮೃತ್ತಿಕೆ ರಥಕ್ಕೆ ಹಸ್ತಾಂತರ ಮಾಡಲಾಯಿತು.
ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯಾ ಪಂಚಾಯತ್ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಇದ್ದರು.

ಆಕ್ರೋಷ: ರಾಜ್ಯ ಸರಕಾರ ಬೇಕಾಬಿಟ್ಟಿ ಕಾಟಾಚಾರಕ್ಕೆ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೆಂಪೇಗೌಡರಿಗೆ ಅಗೌರವ ಉಂಟು ಮಾಡುವ ರೀತಿಯಲ್ಲಿ ಯಾತ್ರೆ ನಡೆಸುತ್ತಿದೆ ಎಂದು ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಪ್ರಮುಖರು ಸರಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಪ್ರಮುಖರಾದ ಜಿ.ಬಿ.ಜಗದೀಶ್, ವಿ.ಜೆ.ನವೀನ್, ಎಂ.ಎಂ.ಪ್ರಕಾಶ್, ನಾಗರಾಜು, ರಘು ಮತ್ತಿತರರು ಶಾಸಕರುಗಳ ಮುಂದೆಯೇ ಕಾರ್ಯಕ್ರಮದ ಬಗ್ಗೆ ಅಸಮಾಧಾನ‌ ಹೊರಹಾಕಿ ಧಿಕ್ಕಾರ ಕೂಗಿದರು.

ಭವ್ಯ ರಥದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳದೆ ಹಾಲು ಸಾಗಾಟ ಮಾಡುವ ಗೂಡ್ಸ್ ವಾಹನದ ಮಾದರಿಯಲ್ಲಿ ಯಾತ್ರೆ ನಡೆಸಲಾಗುತ್ತಿದೆ. ಬೈಚನಹಳ್ಳಿಯಿಂದ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿತ್ತು. ಆದರೆ ಮೆರವಣಿಗೆಗೆ ಅವಕಾಶವೇ ಕೊಡಲಿಲ್ಲ. ಕುಶಾಲನಗರಕ್ಕೆ ಬಂದ ಬಳಿಕ ವಾಹನಕ್ಕೆ ಕೆಂಪೇಗೌಡರ ಭಾವಚಿತ್ರ ಅಳವಡಿಸುವ ಕಾರ್ಯ ನಡೆಸಲಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!