ಕುಶಾಲನಗರ, ಅ 31: ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗೌಡ ಸಮಾಜದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಸಮಾಜದ ಅಧ್ಯಕ್ಷರಾದ ನಡುಗಲ್ಲು
ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ
ಲಕ್ಷ್ಮಿನಾರಾಯಣ ಕಜೆಕದ್ದೆ ಹಾಜರಿದ್ದು ಅರೆಭಾಷೆ ಗೌಡ ಜನಾಂಗದ ಆಚಾರ, ಪದ್ದತಿ, ಸಂಸ್ಕೃತಿಯ ಬಗ್ಗೆ ಮತ್ತು ಗೌಡ ಅಕಾಡಮಿ ಸ್ಥಾಪನೆ ಮತ್ತು ಇದರ ಸದುಪಯೋಗದ ಬಗ್ಗೆ
ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಸಮಾಜದ ಮೇಲೆ ಅಭಿಮಾನವಿಟ್ಟು ಮತ್ತೊಂದು ಸಮಾಜವನ್ನು ಗೌರವಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗ್ರಾಮಪಂಚಾಯ್ತಿ, ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಸಮಾಜದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟೀಯಾ ಮಟ್ಟದಲ ಹಾಕಿ ಕ್ರೀಡೆಯಲ್ಲಿ ಭಾಗವಹಿಸಿದ
ಸಮಾಜದ ಕಾರ್ಯದರ್ಶಿ ತಾರ ಹೇಮರಾಜ್ ಅವರ ಪುತ್ರ ಅಚ್ಚಾಂಡಿರಾ ದೀಕ್ಷಿತ್ ಮತ್ತು ರಾಜ್ಯಮಟ್ಟದಲ ನೃತ್ಯದಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರಾದ ಕೇಡನ ಸೋಮಣ್ಣ
ವಿಶಾಲಾಕ್ಷಿ ಪುತ್ರಿ ಪ್ರಗತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಏಳಿಗೆ ಮತ್ತು ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ಸದಸ್ಯರಾದ ಕುದುಪಜೆ ಆನಂದ
ಸಲಹೆ ಸೂಚನೆ ನೀಡಿದರು.
ಈ ಸಂದರ್ಭ ಸದಸ್ಯೆ ಯೋಗ ಶಿಕ್ಷಕಿ ಆಮೆಮನೆ ಪಾರ್ವತಿ ಯೋಗದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಗುಡ್ಡೆಮನೆ ವಿಶುಕುಮಾರ್, ಕಾರ್ಯದರ್ಶಿ ಅಚ್ಚಾಂಡಿರ ತಾರಹೇಮರಾಜ್, ಸಹಕಾರ್ಯದರ್ಶಿ ಗುಡ್ಡೆಮನೆ ರವಿ, ಖಜಾಂಜಿ ಕುಡೆಕಲ್ಲು
ರೂಪ, ನಿರ್ದೇಶಕರಾದ ಕುಡೆಕ್ಕಲ್ ಗಣೇಶ್, ಕುಡೆಕ್ಕಲ್ ಗುರುಪ್ರಸಾದ್, ಬೊಮ್ಮಡಿರಾ ಬಾಲಕೃಷ್ಣ, ಚಂಡಿರಾ ಮಂಜುನಾಥ್, ಪುದಿಯನೇರವನ ಪದ್ಮಾವತಿ, ಬೈಲೆಮನೆ ಮಾಚಮ್ಮ, ಬೊಮ್ಮೆ
ಗೌಡನ ಭುವನೇಶ್ವರಿ,
ಸಲಹಸಮಿತಿಯ ಸದಸ್ಯರಾದ ಕನ್ನಯ್ಯನ ಬಾಲಕೃಷ್ಣ, ಕೋಡಿಪೂವಯ್ಯ, ಅಚ್ಚಾಂಡಿರಾ ಹೇಮರಾಜ್, ಮಂದೋಡಿ ಜಗನ್ನಾಥ್, ಗುಡ್ಡೆಮನೆ ಜಯ
ವಿಶುಕುಮಾರ್ ಮತ್ತು ಸಂಘದ ಸದಸ್ಯರಾದ ಮಡಿಕೇರಿ ತಾ.ತಹಶೀಲ್ದಾರರಾದ ಪುದಿಯನೇರವರ ಮಹೇಶ್ ಹಾಜರಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Back to top button
error: Content is protected !!