ಕುಶಾಲನಗರ, ಅ 30: ಕುಶಾಲನಗರದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಒಳಗೊಂಡ ಬ್ಯಾನರ್ ಗಳು ರಸ್ತೆಯಲ್ಲಿ ಹರಡಿ ಅಪಮಾನ ಮಾಡಲಾಗಿದೆ ಎಂದು ಸಂಘಸಂಸ್ಥೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಸಂಬಂಧ ಮೃತ್ತಿಕೆ ಸಂಗ್ರಹ ವಾಹನ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಈ ಘಟನೆ ನಡೆದಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮೃತ್ತಿಕೆ ಸಂಗ್ರಹ ವಾಹನಕ್ಕೆ ಕೆಂಪೇಗೌಡರ ಬ್ಯಾನರ್ ಅಳವಡಿಸುವ ಸಂದರ್ಭ ಈ ಘಟನೆ ನಡೆದಿದೆ. ಬ್ಯಾನರ್ ಗಳನ್ನು ನೆಲದಲ್ಲಿ ಬಿಸಾಡಿ ಅಗೌರವ ಉಂಟುಮಾಡಲಾಗಿದೆ ಎಂದು ಗೋವಿಂದರಾಜ್ ದಾಸ್, ನಾಗರಾಜ್ ಎಂ. ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೆಂಪೇಗೌಡರು ಕೇವಲ ಒಂದು ಜಾತಿ ಸಮುದಾಯಕ್ಕೆ ಸೀಮಿತವಲ್ಲ. ಬೆಂಗಳೂರು ನಿಮಾತೃಗೆ ಗೌರವ ಸಲ್ಲಿಸಲು ಸರಕಾರ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಮುಂದೆ ಅಚ್ಚುಕಟ್ಟಾಗಿ ನಡೆಯಬೇಕಿದೆ ಎಂದು ಆಗ್ರಹಿಸಿದರು.
Back to top button
error: Content is protected !!