ಕುಶಾಲನಗರ, ಅ 17: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಪೊನ್ನಂಪೇಟೆಯ ಸಾಯಿಶಂಕರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಅಯ್ಕೆಗೊಂಡಿದೆ. ವಿಜೇತ ತಂಡಕ್ಕೆ ಕಾಲೇಜಿನ ಉಪನ್ಯಾಸಕರಾದ ರಮೇಶ್ ಮತ್ತು ಕಾವೇರಮ್ಮ ತರಬೇತಿ ನೀಡಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ , ಪ್ರಾಂಶುಪಾಲ ಡಾ. ಬಿ.ಕೆ.ಬಸಪ್ಪ ಸೇರಿದಂತೆ ಉಪನ್ಯಾಸಕ ವೃಂದ ತಂಡವನ್ನು ಅಭಿನಂದಿಸಿದೆ. ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯು ಡಿಸೆಂಬರ್ 16-17 ರಂದು ಉಡುಪಿಯಲ್ಲಿ ನಡೆಯಲಿದೆ.
Back to top button
error: Content is protected !!