ಕುಶಾಲನಗರ, ಸೆ 28: ತಾರಕ ಗ್ರಾಮದ ಬಳಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿ ಪತ್ತೆಗೆ ನಾಗರಹೊಳೆ ಉದ್ಯಾನವನದ ಸಾಕಾನೆಗಳ ನೆರವು ಪಡೆಯಲಾಗಿದೆ.
ತಾರಕ ಗ್ರಾಮದ ಬಳಿ ಈಗಾಗಲೆ ಎರಡು ಹುಲಿ ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಸುತ್ತಮುತ್ತಲಿನಲ್ಲಿ ಈಗಾಗಲೆ ಮೂರು ರಾಸುಗಳನ್ನು ಕೊಂದು ಹಾಕಿತ್ತು. ಸಾಕು ಪ್ರಾಣಿಗಳಿಗೆ ಕಂಟಕವಾಗಿರುವ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದರು. ಹುಲಿಯ ಇರುವಿಕೆ ಬಗ್ಗೆ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರು.
ಇದೀಗ ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದ ಪರಾಕ್ರಮಿ ಅಭಿಮನ್ಯು ದಸರಾ ದಲ್ಲಿ ಅಂಬಾರಿ ಹೊರಲು ತೆರಳಿದ್ದರಿಂದ. ಬಲಶಾಲಿ ಬಲರಾಮ ಜೊತೆಗೆ ಅಶ್ವತ್ಥಾಮ ಸಾಕಾನೆಗಳೊಂದಿಗೆ ಅಂತರ ಸಂತೆ ಆರ್ ಎಫ್ ಓ ಸಿದ್ದರಾಜು ನೇತೃತ್ವದಲ್ಲಿ
ಡಿ.ಆರ್.ಎಫ್.ಓ.ಗಳಾದ ಅಂತೋಣಿ.ಮಂಜುನಾಥಾರಾಧ್ಯ. ಚಂದನ್. ಮಾವುತರು ಹಾಗೂ ಕವಾಡಿಗಳು. ಎಸ್ ಟಿ ಪಿ ಎಫ್ ಹಾಗೂ ಅರಣ್ಯ ಸಿಬ್ಬಂದಿಗಳು
ಹುಲಿ ಮತ್ತು ಮರಿಗಳಿಗಾಗಿ ಕೂಂಬಿಂಗ್ ನಡೆಸಿದ್ದು. ರಾತ್ರಿವರೆಗೂ ಹುಲಿ ಪತ್ತೆಯಾಗಿಲ್ಲ.
Back to top button
error: Content is protected !!