ಕುಶಾಲನಗರ, ಸೆ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದ 10 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿ ಒಕ್ಕೂಟದ ಧೈರ್ಯ ಉದ್ದೇಶ ಸಭೆ ನಡೆಸುವ ವಿಧಾನದ ಬಗ್ಗೆ ತರಬೇತಿ ನೀಡಿದರು .ಸೋಮವಾರಪೇಟೆ ತಾಲ್ಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿ .ಸಂಘದ ವಾರದ ಸಭೆಯ ಮಹತ್ವದ ಸಭೆ ನಡೆಸುವ ವಿಧಾನ ಪದಾಧಿಕಾರಿಗಳು ವಾರದ ಸಭೆಯಲ್ಲಿ ಭಾಗವಹಿಸುವ ಉದ್ದೇಶಗಳ ಬಗ್ಗೆ ತರಬೇತಿ ನೀಡಿದರು .ಹಾಗೂ ಕೂಡಿಗೆ ವಲಯದ ಮೇಲ್ವಿಚಾರಕರಾದ ಚೈತನ್ಯ ಕಾರ್ಯಕ್ರಮ ನಿರೂಪಣೆಯೊಂದಿಗೆ ಪಾರದರ್ಶಕ ವ್ಯವಹಾರಕ್ಕೆ ದಾಖಲೀಕರಣದ ಮಹತ್ವ ವಾರದ ಸಭೆ ಹಾಗೂ ಒಕ್ಕೂಟದ ಸಭೆಗಳ ದಾಖಲಾತಿಗಳ ನಿರ್ವಹಣೆ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು .ಹಾಗೂ ಒಕ್ಕೂಟದ ಅಧ್ಯಕ್ಷರಾದ ಗಿರೀಶ್ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಸ್ವಾತಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು .ಈ ಕಾರ್ಯಕ್ರಮದಲ್ಲಿ ವಲಯದ 50ಕ್ಕೂ ಹೆಚ್ಚು ಜನ ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು ತರಬೇತಿ ಪಡೆದುಕೊಂಡರು ಇದೇ ಸಂದರ್ಭದಲ್ಲಿ ಸೇವಾ ಪ್ರತಿನಿಧಿಗಳಾದ ಸ್ವಾತಿ .ಸುನಿತಾ.
ಸುವರ್ಣ .ಅಶ್ವಿನಿ. ರೇಣುಕಾ .ಗೀತಾ .ಸುಧಾ. ನಿರ್ಮಲಾ. ಉಪಸ್ಥಿತರಿದ್ದರು …
Back to top button
error: Content is protected !!