ಕುಶಾಲನಗರ, ಸೆ 16: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಕೆ.ಆರ್.ನಗರ ಬಳಿಯ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು.
ಚುಂಚನಕಟ್ಟೆಯಲ್ಲಿನ ಪುರಾತನ ಇತಿಹಾಸದ ಶ್ರೀಕೋದಂಡ ರಾಮ ದೇವಾಲಯದಲ್ಲಿನ ಚುಂಚ, ಚುಂಚಿ ಎಂಬ ಆದಿವಾಸಿ ಮೂರ್ತಿಗಳ ಇತಿಹಾಸದೊಂದಿಗೆ ಬಹಳ ಅಪರೂಪವಾದ ಶ್ರೀರಾಮನ ಬಲಬದಿಯಲ್ಲಿ ನಿಂತಿರುವ ಸೀತಾದೇವಿಯ ಮೂರ್ತಿಯ ಇತಿಹಾಸದ ಕಥೆಯನ್ನು ಜಾನಪದ ತಂಡದ ಸದಸ್ಯರು ಕೇಳಿ ತಿಳಿದರು.
ಕೊಡಗಿನ ತಲಕಾವೇರಿಯಲ್ಲಿ ಉಗಮಿಸಿ ಸಾಗುವ ಕಾವೇರಿ ನದಿ ಸೖಷ್ಟಿಸಿದ ಸುಂದರವಾದ ಧಾರೆಗಳನ್ನೂ ಚುಂಚನಕಟ್ಟೆಯಲ್ಲಿ ಜಾನಪದ ಅಧ್ಯಯನ ಪ್ರವಾಸ ತಂಡದ ಸದಸ್ಯರು ವೀಕ್ಷಿಸಿದರು. ಕೊಡಗಿನ ಕಾವೇರಿಯಿಂದ ಸ್ಥಳೀಯರು ವರ್ಷದುದ್ದಕ್ಕೂ ಕಬ್ಬು, ಜೋಳ, ತಂಬಾಕು, ಭತ್ತ ಬೆಳೆಯುತ್ತಿದ್ದು ಕಾವೇರಿಯ ಮಹಿಮೆಯಿಂದಾಗಿ ತಮ್ಮ ಜೀವನ ಹಸನಾಗಿದೆ ಎಂದು ಸ್ಥಳೀಯ ಕೖಷಿಕರು ತಂಡದೊಂದಿಗೆ ಹರ್ಷ ವ್ಯಕ್ತಪಡಿಸಿದರು.
ತರುವಾಯ ಆಯೋಜಿತ ಸಭಾ ಕಾರ್ಯಕ್ರಮದಲ್ಲಿ ಕೆ.ಆರ್.ನಗರದ ರೋಟರಿ ಸಂಸ್ಥೆಯ ಉಪರಾಜ್ಯಪಾಲ ಅರುಣ್ ನರಗುಂದ್ ಅವರನ್ನು ಸನ್ಮಾನಿಸಿ ಮಾತನಾಡಿದ ಕೊಡಗುಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಾನಪದವೇ ಎಲ್ಲ ಸಂಸ್ಕೖತಿಗೂ ಮೂಲವಾಗಿದ್ದು, ಜಾನಪದ ಇಲ್ಲದೇ ಜೀವನವೇ ಇಲ್ಲ. ಎಷ್ಟೇ ಆಧುನೀಕತೆ ನಮ್ಮ ಬದುಕಿನ ಶೈಲಿಯಲ್ಲಿ ಬದಲಾವಣೆ ತಂದರೂ ಜಾನಪದದಿಂದ ಜೀವನ ಕ್ರಮ ಬಿಟ್ಟುಹೋಗುವುದಿಲ್ಲ ಎಂದು ಪ್ರತಿಪಾದಿಸಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕೊಡಗಿನ ಕಾವೇರಿ ಕೆ.ಆರ್.ನಗರದಲ್ಲಿಯೂ ಸಮೖದ್ದವಾಗಿ ಹರಿದು ಎರಡೂ ಊರುಗಳನ್ನೂ ನೀರಿನ ಸಂಪತ್ತಿನ ಮೂಲಕ ಬೆಸೆದಿದ್ದಾಳೆ. ಕಾವೇರಿಯನ್ನು ಸ್ಥಳೀಯರೂ ಭಕ್ತಿಭಾವದಿಂದ ಆರಾಧಿಸುತ್ತಿರುವುದು ಆಕೆಯ ಮಹಿಮೆಗೆ ಸಾಕ್ಷಿ ಎಂದರು. ಈ ವಷ೯ ಮಡಿಕೇರಿ ದಸರಾ ಉತ್ಸವದಲ್ಲಿ ಜಿಲ್ಲಾ ಜಾನಪದ ಪರಿಷತ್ ನಿಂದ ಎರಡನೇ ವರ್ಷದ ಜಾನಪದ ದಸರಾ ಆಯೋಜಿಸಲಾಗುತ್ತಿದ್ದು ಅ. ೨ ರಂದು ಜಾನಪದ ದಸರಾ ಆಯೋಜಿಸಲಾಗುತ್ತಿದ್ದು ಸ್ಥಳೀಯ ಜಾನಪದ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಧಿಲನ್ ಚಂಗಪ್ಪ, ವಿರಾಜಪೇಟೆ ಘಟಕದ ಅಧ್ಯಕ್ಷ ಟೋಮಿ ಥಾಮಸ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್ , ಯುವ ಘಟಕದ ಅಧ್ಯಕ್ಷೆ ಚೆರಿಯಮನೆ ಗಾಯತ್ರಿ ವೇದಿಕೆಯಲ್ಲಿದ್ದರು.
ಇದೇ ಸಂದಭ೯ ಜಿಲ್ಲೆಯ ವಿವಿಧ ಜಾನಪದ ಘಟಕಗಳ ಕಲಾವಿದರು ಜಾನಪದ ಗೀತಗಾಯನ ಪ್ರಸ್ತುತ ಪಡಿಸಿದರು.
Back to top button
error: Content is protected !!