ಕ್ರೈಂ

ಅಕ್ರಮವಾಗಿ ಬೀಟೆ ನಾಟ ಸಾಗಾಟ: ನಾಲ್ವರ ಬಂಧನ

ಕುಶಾಲನಗರ ವಲಯ ಅರಣ್ಯ ಇಲಾಖೆ ಕಾರ್ಯಾಚರಣೆ

ಕುಶಾಲನಗರ, ಸೆ, 16: ದಿನಾಂಕ 15-09-2022 ರ ರಾತ್ರಿ 10.00 ಗಂಟೆ ಸುಮಾರಿಗೆ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ಗುಡ್ಡೆಹೊಸೂರು-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಟಾಟಾ ಎಸಿ ವಾಹನ ಸಂಖ್ಯೆ : ಕೆಎ-450-3317 ಮತ್ತು ಬೊಲೇರೋ ಜೀಪ ವಾಹನ ನೊಂದಾಣಿ ಸಂಖ್ಯೆ : ಕೆಎ-9ಜೆಡ್-0963 ರ ವಾಹನದಲ್ಲಿ ಭತ್ತದ ಹೊಟ್ಟುಗಳನ್ನು ತುಂಬಿಸಿಕೊಂಡು ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ಸದ್ರಿ ಟಾಟಾ ಎಸಿ ಹಾಗೂ ಬೊಲೇರೋ ಜೀಪು ವಾಹನದಲ್ಲಿ ಬೀಟೆ ಮರದ 15 ನಾಟಾಗಳಿರುವುದು ಕಂಡುಬಂದಿರುತ್ತದೆ. ಎರಡು ವಾಹನಗಳ ಚಾಲಕ ಹಾಗೂ ವಾಹನದಲ್ಲಿದ್ದ ಕುಮಾರ ಎನ್, ತಂದೆ : ನಾಗರಾಜು ಶೆಟ್ಟಿ ಬಿ, ಪ್ರಾಯ : 35 ವರ್ಷ, ಗುರುಪುರ ಗ್ರಾಮ, ಹುಣಸೂರು ತಾಲ್ಲೂಕು, ರಮೇಶ, ತಂದೆ : ಪೌತಿ ನರಸಯ್ಯ, ಪ್ರಾಯ : 41 ವರ್ಷ, ಕಲ್ಲುಕುಣಿಕೆ ಗ್ರಾ ಹುಣಸೂರು ತಾಲ್ಲೂಕು, ರಮೇಶ ಟಿ ಆರ್, ತಂದೆ : ರಾಮರ್ ಟಿ, ಪ್ರಾಯ : 29 ವರ್ಷ, ಬರಡಿ, ನೆಲ್ಲಿಹುದಿಕೇರಿ ಗ್ರಾಮ, ಕುಶಾಲನಗರ ತಾಲ್ಲೂಕು, ತಂಗರಾಜ ಎಮ್.ವಿ, ತಂದೆ : ವಿಶ್ವನಾಥ ಎಮ್.ಆರ್, ಪ್ರಾಯ : 30 ವರ್ಷ, ಬರಡಿ, ನೆಲ್ಲಿಹುದಿಕೇರಿ ಗ್ರಾಮ ಇವರನ್ನು ಇಲಾಖಾ ಪರ ಬಂಧಿಸಲಾಗಿರುತ್ತದೆ.

ಅಕ್ರಮವಾಗಿ ಸದ್ರಿ ಸೊತ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಸುಬಂಧ ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ : 17/2022-23 ನ್ನು ದಾಖಲಿಸಲಾಗಿರುತ್ತದೆ. ಟಾಟಾ ಎಸಿ ವಾಹನ ಸಂಖ್ಯೆ : ಕೆಎ-45ಎ-3317 ಮತ್ತು ಬೊಲೇರೋ ಜೇನ ವಾಹನ ನೊಂದಾಣಿ ಸಂಖ್ಯೆ : ಕೆಎ-ಜೆಡ್ (1963 ರ ಹಾಗೂ ಬೀಟೆ ಮರದ 15 ನಾಟಾಗಳನ್ನು ಇಲಾಖಾ ಪರ ವಶಪಡಿಸಿಕೊಳ್ಳಲಾಗಿರುತ್ತದೆ. ಇಲಾಖಾ ಪರ ವಶಪಡಿಸಿಕೊಂಡಿರುವ ವಾಹನ ಹಾಗೂ ಬೀಟೆ ಮರದ ನಾಟಾಗಳನ್ನು ಭದ್ರತೆಗಾಗಿ ಗಂಧದ ಕೋಠಿಯಲ್ಲಿ ಇಡಲಾಗಿದ್ದು, ಬೀಟೆ ಮರದ ನಾಟಾ ಮತ್ತು ವಾಹನದ ಅಂದಾಜು ಮೌಲ್ಯ ರೂ. 10.00 ಲಕ್ಷಗಳಾಗಿರುತ್ತದೆ.

ಸದರಿ ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ ಟಿ ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ ಎ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಶಿವರಾಮ್ ಕೆ ವಿ, ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ ಎನ್ ದೇವಯ್ಯ, ಅನಿಲ್‌ ಡಿಸೋಜ, ಕೆ ಎಸ್ ಸುಬ್ರಾಯ, ಅರಣ್ಯ ರಕ್ಷಕರಾದ ಸಿದ್ಧರಾಮ ನಾಟಿಕಾರ್, ರವಿ ಉತ್ನಾಳ್, ಮಂಜೇಗೌಡ ವಿ. ಎಸ್, ಸಚಿನ್ ಟಿ ಕೆ, ವಾಹನ ಚಾಲಕರಾದ ಶ್ರೀ ಜೇಮ್ಸ್ ಗಾಲ್ವಿನ್, ಆರ್.ಆರ್.ಟಿ ಸಿಬ್ಬಂದಿಗಳಾದ ಸಿದ್ಧ ಯೋಗೇಶ್ ಸಿ, ಮಂಜ ಇವರು ಪಾಲ್ಗೊಂಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!