ಕ್ರೈಂ

ನಕ್ಷತ್ರ ಆಮೆ ಸಾಗಾಟ: ಆರೋಪಿಗಳನ್ನು‌ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಕುಶಾಲನಗರ, ಸೆ 05: ದಿನಾಂಕ
05-09-2022 ರಂದು ಕುಶಾಲನಗರ ವಲಯದ ಕೂಡ್ಲೂರು ಗ್ರಾಮ ವ್ಯಾಪ್ತಿಯ ಕೂಡಿಗೆ-ಕುಶಾಲನಗರ ಮುಖ್ಯ ರಸ್ತೆಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಎದುರು ಕೆಎ-51-ಪಿ-553 ಕಾರಿನಲ್ಲಿ ಅಕ್ರಮವಾಗಿ ನಕ್ಷತ್ರ ಆಮೆಯನ್ನು ಸಾಗಿಸುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಶಾಂತಳ್ಳಿಯ ಬಾಚಳ್ಳಿ ಗ್ರಾಮದ ಜಿ.ಡಿ ಗಿರೀಶ್
ಹಾಗೂ ಹಾಸನದ ಹಳ್ಳಿಗದ್ದೆ ಗ್ರಾಮದ ಅಭಿಶೇಖ್‌ ಹೆಚ್.ಎಂ ಎಂಬುವವರನ್ನು ಬಂಧಿಸಿ 01 ನಕ್ಷತ್ರ ಆಮೆಯನ್ನು ವಶಪಡಿಸಿಕೊಂಡು ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎನ್ ಮೂರ್ತಿ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಎ.ಟಿ ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ ಗೋಪಾಲ್ ರವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಶ್ರವಣಕುಮಾರ ವಿಭೂತಿ, ಚೇತನ್ ಎನ್.ಎಲ್, ಅರಣ್ಯ ರಕ್ಷಕರಾದ ಸಚಿನ್ ಟಿ.ಕೆ, ವಾಹನ ಚಾಲಕ ಜೇಮ್ಸ್, ಬಸವರಾಜ್ ಹಾಗೂ ಆರ್‌ಆರ್‌ಟಿ ತಂಡದ ಸಿಬ್ಬಂದಿಗಳಾದ ರವಿ ಬಿ.ಪಿ, ಗಜೇಂದ್ರ ಬಿ.ಪಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!